Breaking
24 Jun 2026, Wed

ಗ್ಯಾಸ್ ಒಲೆಯ ಮೇಲೆ ಇಟ್ಟಿದ್ದ ಕುಕ್ಕರ್ ಸ್ಪೋಟ: ಮನೆಮಂದಿ ಅಪಾಯದಿಂದ ಪಾರು

ಸುಳ್ಯ: ಗ್ಯಾಸ್‌ ಒಲೆಯಲ್ಲಿ ಇಟ್ಟಿದ್ದ ಕುಕ್ಕರ್ ಸಿಡಿದು ಅಡುಗೆ ಮನೆಗೆ ಹಾನಿಯಾದ ಘಟನೆ ಸುಳ್ಯದ ಬೋರುಗುಡ್ಡೆ ಎಂಬಲ್ಲಿ ನ. 19ರಂದು ನಡೆದಿದೆ.

ಬೋರುಗುಡ್ಡೆ ನಿವಾಸಿ ಅಬ್ದುಲ್ಲಾ ಎಂಬವರ ಮನೆಯಲ್ಲಿ ಬೆಳಗಿನ ಉಪಹಾರ ತಯಾರಿಸುವ ವೇಳೆ ಗ್ಯಾಸ್ ಒಲೆಯ ಮೇಲೆ ಇಟ್ಟಿದ್ದ ಕುಕ್ಕರ್ ಹಠಾತ್ ಸಿಡಿದಿದೆ.

ಪರಿಣಾಮ ಅಡುಗೆ ಮನೆಯ ಗೋಡೆ, ಟೈಲ್ಸ್ ಮೇಲ್ಪಾವಣಿ ಹಾಗೂ ಅಡುಗೆ ಸಾಮಗ್ರಿಗಳು ಹಾನಿಗೊಂಡಿದ್ದು, ಅದೃಷ್ಟವಶಾತ್ ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *