Breaking
23 Mar 2026, Mon

ಅಮ್ಟಾಡಿ ಹಾಲು ಉತ್ಪಾದಕರ ಸಂಘಕ್ಕೆ ಎಸ್.ಆರ್. ಗೌಡರವರ ಒಕ್ಕೂಟದ 100 ಕಾರ್ಯದರ್ಶಿಗಳ ತಂಡದೊಂದಿಗೆ ಅಧ್ಯಯನ ಬೇಟಿ

ಬಂಟ್ವಾಳ: ಅಮ್ಟಾಡಿ ಹಾಲು ಉತ್ಪಾದಕರ ಸಂಘಕ್ಕೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷರು ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಎಸ್. ಆರ್ . ಗೌಡರವರ ಒಕ್ಕೂಟದ 100 ಕಾರ್ಯದರ್ಶಿಗಳ ತಂಡದೊಂದಿಗೆ ಅಧ್ಯಯನಕ್ಕೆ ಬೇಟಿ ನೀಡಿದರು.

ಈ ಸಂದರ್ಭ ದಲ್ಲಿ ಸಂಘದ ಅಧ್ಯಕ್ಷರಾದ ಉದಯ ಕುಮಾರ್ ಅಜಕಲ ಹಾಗೂ ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಜಾನಟ್ ರನ್ನು ಸನ್ಮಾನಿಸಲಾಯಿತು ಬಳಿಕ ಅವರು ಮಾತನಾಡಿ ಸಂಘದ  ಅಭಿವೃದ್ಧಿ ಹಾಗೂ ವ್ಯವಸ್ಥೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಈ ವೇಳೆ ಸಂಘದ ಉಪಾಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಕಾರ್ಯದರ್ಶಿ ಸತೀಶ್ ಶೆಟ್ಟಿ, ಹಾಲು ಪರೀಕ್ಷಕಿ ವೀಣಾ ಲೋಬೊ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *