Breaking
27 Jun 2026, Sat

ಆಟೋ ಬ್ಯಾಟರಿ ದೋಷದಿಂದ ಗ್ಯಾರೇಜ್‌ಗೆ ತಗುಲಿದ ಬೆಂಕಿ: ಶಾಪ್ ನಲ್ಲಿದ್ದ ವಸ್ತುಗಳು ಬೆಂಕಿಗಾಹುತಿ

ಬೆಳ್ತಂಗಡಿ: ಆಟೋದ ಬ್ಯಾಟರಿಯ ದೋಷದಿಂದ ಗ್ಯಾರೇಜ್ ಗೆ ಬೆಂಕಿ ತಗುಲಿದ ಘಟನೆ ಹಳೆಕೋಟೆಯ ವಾಣಿ ಕಾಲೇಜ್ ಮುಂಭಾಗದಲ್ಲಿ ನ. 16 ರಂದು ನಡೆದಿದೆ.

ರಾಘವೇಂದ್ರ ಪೂಜಾರಿ ಮಾಲಕತ್ವದ ಸ್ವಸ್ತಿಕ್ ಆಟೋ ಗ್ಯಾರೇಜಿನಲ್ಲಿ ನ.16 ರಂದು ಸಂಜೆ ಕೆಲಸಗಾರರು ಆಟೋವನ್ನು ಶಾಪ್‌ ಒಳಗೆ ಇಟ್ಟು ಬೀಗ ಹಾಕಿ ಹೋಗಿದ್ದರು. ಬಳಿಕ ರಾತ್ರಿ ಸುಮಾರು 8.30 ಸುಮಾರಿಗೆ ಬ್ಯಾಟರಿ ದೋಷದಿಂದ ಬೆಂಕಿ ತಗುಲಿ ಗ್ಯಾರೇಜ್ ಸಂಪೂರ್ಣ ಸುಟ್ಟು ಹೋಗಿದೆ. ಶಾಪ್ ನಲ್ಲಿದ್ದ ಹಲವು ವಸ್ತುಗಳು ಬೆಂಕಿಗಾಹುತಿಯಾಗಿವೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸರು ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.

Leave a Reply

Your email address will not be published. Required fields are marked *