Breaking
26 Sep 2026, Sat

ಸಮಾಲೋಚನಾ ಕೇಂದ್ರದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

ಉಡುಪಿ: ದಾಂಪತ್ಯ ಸಮಸ್ಯೆಯ ಪರಿಹಾರಕ್ಕಾಗಿ ಸಮಾಲೋಚನಾ ಕೇಂದ್ರಕ್ಕೆ ಭೇಟಿ ನೀಡಿದ್ದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆಪ್ತ ಸಮಾಲೋಚಕನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೂಳೂರು ಗ್ರಾಮದ ನಿವಾಸಿ ನಿರಂಜನ್ ಶೇಖ‌ರ್ ಶೆಟ್ಟಿ(52) ಎಂದು ಗುರುತಿಸಲಾಗಿದೆ.

ಮಹಿಳೆಯು ತನ್ನ ದಾಪಂತ್ಯ ಸಮಸ್ಯೆಗಳಿಗೆ ಸಲಹೆ ಪಡೆಯಲು ಕಾಪು ತಾಲೂಕಿನ ಮೂಳೂರಿನ ವೆಲ್‌ನೆಸ್‌ ಸೆಂಟರ್‌ಗೆ ಭೇಟಿ ನೀಡಿದ್ದರು. ಸಮಾಲೋಚನೆ ನಡೆಯುತ್ತಿದ್ದಾಗ, ಆರೋಪಿಯು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಘಟನೆಯ ನಂತರ, ಸಂತ್ರಸ್ತೆ ಕಾಪು ಪೊಲೀಸ್‌ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Reply

Your email address will not be published. Required fields are marked *