Breaking
23 Mar 2026, Mon

ಭಾರತೀಯ ಜನತಾ ಪಾರ್ಟಿ ದ.ಕ. ಜಿಲ್ಲೆ ಬೆಳ್ತಂಗಡಿ ಮಂಡಲ ಕುವೆಟ್ಟು ಮತ್ತು ಓಡಿಲ್ನಾಳ ಶಕ್ತಿಕೇಂದ್ರ ಅಭ್ಯಾಸವರ್ಗ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ದ.ಕ. ಜಿಲ್ಲೆ ಬೆಳ್ತಂಗಡಿ ಮಂಡಲ ಕುವೆಟ್ಟು ಮತ್ತು ಓಡಿಲ್ನಾಳ ಶಕ್ತಿಕೇಂದ್ರದ ಅಭ್ಯಾಸವರ್ಗ ಕಾರ್ಯಕ್ರಮವು ನ. 16 ರಂದು ಕುವೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಕುಲಾಲ್ ಅವರ ಮನೆಯಲ್ಲಿ ನಡೆಯಿತು.

ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿರುವ ಗಂಗಯ್ಯ ಮೂಲ್ಯ ಮತ್ತು ಮಾಜಿ ಕುವೆಟ್ಟು ಪಂಚಾಯತ್ ಅಧ್ಯಕ್ಷ ಅಧ್ಯಕ್ಷರು ಆಗಿದ್ದ ಪೂವಪ್ಪ ಭಂಡಾರಿಯವರು ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಮಂಡಲ ಉಪಾಧ್ಯಕ್ಷ ಕೊರಗಪ್ಪ ಗೌಡ ಉದ್ಘಾಟನಾ ಭಾಷಣ ಮಾಡಿ ಶುಭ ಹಾರೈಸಿದರು.

ಈ ವೇಳೆ ವೈಚಾರಿಕತೆ ಮತ್ತು ಪಂಚ ಪರಿವರ್ತನೆ ವಿಷಯವನ್ನು ಉಮೇಶ್ ನರ್ತಿಕಲ್ಲು ಮಂಡನೆ ಮಾಡಿದರು. ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದೊಂದಿಗೆ ನಮ್ಮ ಪಾತ್ರ ಈ ವಿಷಯವನ್ನು ಸುದೀರ್ ಸುವರ್ಣ ಅಳದಂಗಡಿಯವರು ಮಂಡಿಸಿದರು. ವಿಕಸಿತ ಭಾರತದ ಅಮೃತ ಕಾಲದಲ್ಲಿ ನಮ್ಮ ಸಕ್ರಿಯತೆ ವಿಷಯವನ್ನು ಸೀತಾ ರಾಮ್ ಬೆಲಾಲ್ ಅವರು ಮಂಡಿಸಿದರು.ಬೂತ್ ಷ ಬೈಠಕ್ ಧರ್ಮಸ್ಥಳ ಮಹಾಶಕ್ತಿಕೇಂದ್ರ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆಯವರು ತೆಗೆದುಕೊಂಡು ವರದಿ ಪಡೆದುಕೊಂಡರು. ಶಾಸಕ ಹರೀಶ್ ಪೂಂಜ ಸಮಾರೋಪ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಧ ಮಮತಾ ಶೆಟ್ಟಿ ದೇವಸ್ಯ,ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಉಮೇಶ್ ಕುಲಾಲ್, ಹಿಂದುಳಿದ ಮೋರ್ಚಾದ ತಾಲೂಕು ಕಾರ್ಯದರ್ಶಿ ವಿಠಲ ಆಚಾರ್ಯ, ಮಾಜಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕರಾದ ಪ್ರಭಾಕರ್ ಶೆಟ್ಟಿ ಉಪ್ಪಡ್ಕ, ತಿಲಕ್ ಕಂಚಿಂಜ, ಕುವೆಟ್ಟು ಶಕ್ತಿ ಕೇಂದ್ರದ ಅಧ್ಯಕ್ಷರಾದ ಚಂದ್ರಹಾಸ ದಾಸ್, ಓಡಿಲ್ನಾಳ ಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜಪ್ರಕಾಶ್ ಪಡ್ಡೈಲು ಹಾಗು ಕುವೆಟ್ಟು ಮತ್ತು ಓಡಿಲ್ನಾಲ ಭಾಗದ ಪಂಚಾಯತ್ ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪಂಚಾಯತ್ ಅಧ್ಯಕ್ಷರಾದ ಭಾರತಿ ಶೆಟ್ಟಿ ಬಿಜೆಪಿ ಗೀತೆ ಯೊಂದಿಗೆ ಸಂಪದ ಆರಂಭ ಆಗಿ, ಕುಮಾರಿ ರಮ್ಯಾ ಅವರು ವಂದೇಮಾತರಂ ಗೀತೆ ಹಾಡಿದರು. ಬೆಳ್ತಂಗಡಿ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಸ್ವಾಗತಿಸಿದರು, ನಿತಿನ್ ಬರಾಯ ಗ್ರಾಮ ಪಂಚಾಯತ್ ಸದಸ್ಯರು ಕುವೆಟ್ಟು ಧನ್ಯವಾದವಿತ್ತರು.

Leave a Reply

Your email address will not be published. Required fields are marked *