ಉಡುಪಿ: ಜಿಲ್ಲೆಯ ಕಟಪಾಡಿಯ ಶಂಕರಪುರಲ್ಲಿರುವ ಶ್ರೀ ಸಾಯಿಮುಖ್ಯಪ್ರಾಣ ಕಾಲ ಭೈರವ ದೇವಸ್ಥಾನದಲ್ಲಿ ಶ್ರೀ ಕಾಲಭೈರವ ಜಯಂತಿ ಪ್ರಯುಕ್ತ ಅಘೋರ ಭೈರವ ಹವನ, ಮಹಾಭೋಗ್ ನ. 12 ರಂದು ನಡೆಯಿತು.
ಶ್ರೀ ದ್ವಾರಕಾಮಾಯಿ ಮಠದ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಉಪಸ್ಥಿತಿಯಲ್ಲಿ ಹಾಗೂ ಅಘೋರ ಅಖಾಡ್ ಅಘೋರಿ ಶ್ರೀ ಮದನ್ ನಾಥ್ ಜೀ ಅವರ ನೇತೃತ್ವದಲ್ಲಿ ಜಯಂತಿಯನ್ನು ಆಚರಣೆ ಮಾಡಲಾಯಿತು.

ಈ ನಿಟ್ಟಿನಲ್ಲಿ ಬೆಳಗ್ಗೆ ಕಲಶಾಭಿಷೇಕ, ಅಲಂಕಾರ ಪೂಜೆಯಿಂದ ಆರಂಭಗೊಂಡು ಬಳಿಕ ಅಘೋರ ಭೈರವ ಹವನ, ಮಧ್ಯಾಹ್ನ ಮಹಾ ಪೂಜೆ, ಭೈರವ ಹವನ ಗಂಟು ಸಮರ್ಪಣೆ ನಡೆಯಿತು. ಬಳಿಕ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಅನ್ನ ಪ್ರಸಾದ ಸ್ವೀಕರಿಸಿ, ಸಂಜೆ ವೇಳೆ ಭಜನೆ, ಅಷ್ಟಭೈರವ ಬಲಿ ಸೇವೆ ನೆರವೇರಿತು.

ಈ ಸಂದರ್ಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಶ್ರೀ ಶಿವ್ ಕುಮಾರ್ ಸ್ವಾಮೀಜಿ ಸಿದ್ದಂಕುಲ, ಧರ್ಮದರ್ಶಿ ಸುಕುಮಾರ್ ಮೋಹನ್ ಮುದ್ರಾಡಿ, ಮಂದಿರದ ಟ್ರಸ್ಟಿಗಳಾದ ವಿಶ್ವನಾಥ ಸುವರ್ಣ, ಸ್ಮಿತಾ ಪ್ರವೀಣ್, ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ದ್ವಾರಕಾಮಾಯಿ ಮಠದ ಟ್ರಸ್ಟಿಗಳಾದ ಕಿರಣ್ ಜೋಗಿ ಮಂಗಳೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.




