Breaking
20 Jun 2026, Sat

ಶಿವಮೊಗ್ಗದಲ್ಲಿ ಏಕಾಏಕಿ ರಸ್ತೆಗೆ ಬಂದ ವ್ಯಕ್ತಿ, ಲಾರಿಯ ಹಿಂಬದಿಯ ಚಕ್ರಕ್ಕೆ ಕಾಲು ಸಿಲುಕಿ ಕಟ್

ಶಿವಮೊಗ್ಗ: ವ್ಯಕ್ತಿಯೋರ್ವ ಏಕಾಏಕಿ ರಸ್ತೆಗೆ ಬಂದ ಪರಿಣಾಮ ಲಾರಿಯ ಹಿಂಬದಿಯ ಚಕ್ರಕ್ಕೆ ಆತನ ಕಾಲು ಸಿಲುಕಿ ಕಟ್ ಆಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕೊಪ್ಪ ತೀರ್ಥಹಳ್ಳಿ ತಾಲೂಕಿನ ತಳುವೆ ಬಳಿ ನ.12ರಂದು ನಡೆದಿದೆ.

ಈತ ಬುಧವಾರ ರಸ್ತೆಯಲ್ಲಿ ಓಡಾಡುವ ಬಸ್ ಹಾಗೂ ಕಾರುಗಳಿಗೆ ಅಡ್ಡ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ಮಧ್ಯಾಹ್ನ ಖಾಸಗಿ ಬಸ್ ವೊಂದಕ್ಕೆ ಅಡ್ಡ ಹೋಗಿದ್ದಾನೆ ಬಸ್ ನಿಧಾನವಾಗಿ ಬರುತ್ತಿದ್ದ ಕಾರಣ ಬ್ರೇಕ್ ಹಾಕಲಾಗಿದೆ. ನಂತರ ಬಸ್ ಡ್ರೈವರ್ ಈತನಿಗೆ ಬೈದು ಬುದ್ಧಿವಾದ ಹೇಳಿ ಹೋಗಿದ್ದರು ಎಂದು ತಿಳಿದುಬಂದಿದೆ ಆದರೂ ಸಂಜೆ ಲಾರಿ ಬರುತ್ತಿದ್ದದ್ದನ್ನು ನೋಡಿ ಏಕಾಏಕಿ ರಸ್ತೆಗೆ ಹಾರಿದ್ದಾನೆ. ಈ ವೇಳೆ ಲಾರಿ ಚಾಲಕ ಎಷ್ಟೇ ತಪ್ಪಿಸಿದರು ಲಾರಿ ಹಿಂದಿನ ಚಕ್ರಕ್ಕೆ ಸಿಲುಕಿ ಕಾಲು ಕಟ್ ಮಾಡಿಕೊಂಡಿದ್ದಾನೆ.

ಈ ಅಪಘಾತಕ್ಕೆ ಆ ವ್ಯಕ್ತಿಯೇ ಕಾರಣ ಎಂಬ ಮಾತು ಸ್ಥಳೀಯರಿಂದ ಕೇಳಿ ಬರುತ್ತಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *