Breaking
4 Feb 2026, Wed

ಕಡಬದ ನೂಜಿಬಾಳ್ತಿಲದ ಯುವಕ ಬೆಂಗಳೂರಿನ ರೂಂ ನಲ್ಲಿ ಆತ್ಮಹತ್ಯೆ

ಕಡಬ: ಬೆಂಗಳೂರಿನ ರೂಂ ನಲ್ಲಿ ಕಡಬದ ನೂಜಿಬಾಳ್ತಿಲ ಗ್ರಾಮದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತನನ್ನು ಕಲ್ಲುಗುಡ್ಡೆ ನಿವಾಸಿ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಜುಬಿನ್ (25) ಎಂದು ಗುರುತಿಸಲಾಗಿದೆ. ಜುಬಿನ್ ವಿದೇಶಕ್ಕೆ ಹೋಗುವ ಸಿದ್ಧತೆ ನಡೆಸುತ್ತಿದ್ದರೆಂದು ತಿಳಿದುಬಂದಿದ್ದು, ಈ ನಡುವೆ ಆತ್ಮಹತ್ಯೆಗೆ ಶರಣಾಗಿರುವುದು ಮನೆಯವರಿಗೆ ಅಘಾತವನ್ನು ಉಂಟು ಮಾಡಿದೆ.

ಆತ್ಮಹತ್ಯೆಯ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Leave a Reply

Your email address will not be published. Required fields are marked *