Breaking
6 May 2026, Wed

ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಹೊಕ್ಕಾಡಿಗೋಳಿ ಕಂಬಳದ ಕರೆ ಮುಹೂರ್ತ

ಬೆಳ್ತಂಗಡಿ : ತಾಲೂಕಿನ ಆರಂಬೋಡಿಯ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಹೊಕ್ಕಾಡಿಗೋಳಿ ಕಂಬಳದ ಕರೆ ಮುಹೂರ್ತವು ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ಅಮ್ಮನವರ ಮತ್ತು ಮೂಜುಲ್ನಾಯ ಕೊಡಮಣಿತ್ತಾಯ ದೈವದ ಆಶೀರ್ವಾದದೊಂದಿಗೆ ನಡೆಯಿತು.

ಕಂಬಳ ಸಮಿತಿಯ ಅಧ್ಯಕ್ಷರಾದ ರಶ್ಮಿತ್ ಶೆಟ್ಟಿ ನೋಣಾಲುಗುತ್ತು, ದೀಪ ಬೆಳಗಿಸಿ,ಮುಂದೆ ನಡೆಯುವ ಕೆಲಸ ಕಾರ್ಯಗಳು ಜೊತೆಗೆ ಕಂಬಳವು ಯಶಸ್ವಿ ಯಾಗಿ ಮುನ್ನಡೆಯಲಿ ಎಂದು ಸ್ಥಳ ಸಾನಿಧ್ಯದ ದೈವ ದೇವರಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಸಂಜೀವ ಶೆಟ್ಟಿ ಗುಂಡ್ಯಾರು, ಗೌರವ ಸಲಹೆಗಾರರಾದ ಜಗತ್ಪಾಲ ಶೆಟ್ಟಿ ಉಮನೊಟ್ಟು, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಎಚ್, ಕಾರ್ಯದರ್ಶಿ ಪುಷ್ಪರಾಜ್ ಜೈನ್, ಸ್ಥಳದಾನಿಗಳಾದ ರಾಜು ಶೆಟ್ಟಿ ಹೊಕ್ಕಾಡಿ, ಸುಧೀರ್ ಶೆಟ್ಟಿ ಕಂಬಳ ಮನೆ, ಪ್ರವೀಣ್ ಕುಲಾಲ್, ಸುಂದರ ಪೂಜಾರಿ ನಿಡ್ಯಾಲ, ಉಪಾಧ್ಯಕ್ಷರಾದ ಸಂತೋಷ್ ಮಂಜಿಲ, ಸುರೇಶ್ ಎಚ್. ರಾಜೇಶ್ ಹುಲಿಮೇರು ಹೊಕ್ಕಾಡಿಗೋಳಿ, ನವೀನ್ ಆಚಾರ್ಯ ಉಪ್ಪಿರ, ನಿತೇಶ್ ಹನ್ನೆರಡುಕವಲು, ಸಂಘ ಸಂಸ್ಥೆ, ಭಜನಾ ಮಂಡಳಿ, ಕಂಬಳ ಸಮಿಯ ಸದಸ್ಯರು, ಕಂಬಳಾಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *