Breaking
23 Mar 2026, Mon

ಮೆಹಂದಿ ಕಾರ್ಯಕ್ರಮದಲ್ಲಿ ಪರವಾನಿಗೆ ಪಡೆಯದೆ ಡಿಜೆ ಬಳಕೆ : ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲು

ಮಂಗಳೂರು: ಹೊರವಲಯದ ಉಳ್ಳಾಲದ ಕೊಣಾಜೆ ಗ್ರಾಮದ ದಾಸರ ಮೂಲೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಸಿ ಸದ್ದು ಉಂಟುಮಾಡಿದ ಆರೋಪದ ಮೇಲೆ ಮನೆಯ ಯಜಮಾನ ಕೀರ್ತನ್ ಹಾಗೂ ಡಿ.ಜೆ.ಆಪರೇಟರ್ ಮಾನಸ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಕೀರ್ತನ್ ಎಂಬವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮದ ಅಂಗವಾಗಿ ಧ್ವನಿವರ್ಧಕ ಬಳಸಿ ಯುವಕರು ನರ್ತಿಸುತ್ತಿರುವುದು ಕಂಡುಬಂದಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾದ ಹಿನ್ನಲೆಯಲ್ಲಿ ಸ್ಥಳೀಯರು ದೂರು ನೀಡಿದರು.

ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಡಿ.ಜೆ ಆಪರೇಟರ್ ಮಾನಸ್ ಪರವಾನಗಿ ಪಡೆದಿರಲಿಲ್ಲ ಎಂದು ಗಮನಿಸಿ ಎರಡು ಬೇಸ್ ಸ್ಪೀಕರ್‌, ಎರಡು ಟಾಪ್ ಸ್ಫೀಕರ್‌, ಒಂದು ಆ್ಯಂಪ್ಲಿಫೈಯರ್‌, ಬಾಕ್ಸ್ ಕೇಬಲ್‌, ಮೈಕ್‌ ಹಾಗೂ ಮೈಕ್‌ನ ಕೇಬಲ್ ಹಾಗೂ ಎರಡು ವಿದ್ಯುತ್ ದೀಪಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *