Breaking
22 Mar 2026, Sun

ಬೆಳ್ತಂಗಡಿಯಲ್ಲಿ ಅಕ್ರಮ ದನ ಸಾಗಾಟ,ಇಬ್ಬರು ಆರೋಪಿಗಳು ಅರೆಸ್ಟ್

ಬೆಳ್ತಂಗಡಿ : ಅಕ್ರಮವಾಗಿ ಕಾರಿನಲ್ಲಿ ದನಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರು ಎಂಬಲ್ಲಿ ಧರ್ಮಸ್ಥಳ ಠಾಣೆಯ ಪೊಲೀಸರು ಭೇಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರಿನಲ್ಲಿದ್ದ ಉಳ್ಳಾಲ ತಾಲೂಕಿನ ಸಜಿಪ ಪಡು ಗ್ರಾಮದ ಕೋಟೆಕನಿ ನಿವಾಸಿ ಹಮೋದ್ ಕೆ. ಮಗ ಮಹಮ್ಮದ್ ಸಿನಾನ್ (25) ಮತ್ತು ಉಳ್ಳಾಲ ತಾಲೂಕಿನ ಸಜಿಪನಾಡು ಗ್ರಾಮದ ತಂಚಿಬೆಟ್ಟು ನಿವಾಸಿ ಮಹಮ್ಮದ್ ಮಗ ಇಬ್ರಾಹಿಂ ಖಲೀಲ್ ತೌಸೀಫ್(38) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್ ಗಾಣಿಗೇರ ನೇತೃತ್ವದ ತಂಡ ಬೆಳ್ತಂಗಡಿಯ ಪಟ್ರಮೆ ಗ್ರಾಮದ ಪಟ್ಟೂರಿನ ರಸ್ತೆಯಲ್ಲಿ ಕಾರನ್ನು ತಡೆದು ನಿಲ್ಲಸಿ ಪರಿಶೀಲನೆ ಮಾಡಿದಾಗ ಅಕ್ರಮವಾಗಿ ಮೂರು ದನಗಳನ್ನು ಸಾಗಾಟ ಮಾಡುತ್ತಿದ್ದನ್ನು ಪತ್ತೆ ಹಚ್ಚಿದ್ದಾರೆ.

ಪೊಲೀಸರ ವಿಚಾರಣೆಯ ವೇಳೆ ಆರೋಪಿಗಳು ಮೂರು ದನಗಳನ್ನು ಜೋಹಾರ ಪಟ್ಟೂರು ಗ್ರಾಮದಿಂದ ಖರೀದಿಸಿ ಮಾಂಸ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಬಾಯಿಬಿಟ್ಟಿದ್ದಾರೆ.

ಮೂರು ಜಾನುವಾರು ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು ಜಾನುವಾರುಗಳ ಮೌಲ್ಯ 20 ಸಾವಿರ ಹಾಗೂ ಕಾರಿನ ಮೌಲ್ಯ 2 ಲಕ್ಷ ರೂಪಾಯಿಯಾಗಿದೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *