Breaking
21 Jun 2026, Sun

ಕುದುರೆಮುಖದಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿ

ಕುದುರೆಮುಖ: ಕಾಡಾನೆಯ ದಾಳಿಗೆ ಇಬ್ಬರು ಬಲಿಯಾದ ಘಟನೆ ಕುದುರೆಮುಖದಲ್ಲಿ ನಡೆದಿದೆ.

ಮೃತರನ್ನು ಕೆರೆಗದ್ದೆ ನಿವಾಸಿಗಳಾದ ಹರೀಶ್ ಶೆಟ್ಟಿ(44) ಮತ್ತು ಉಮೇಶ (48) ಎಂದು ಗುರುತಿಸಲಾಗಿದೆ.

ನಾಯಿಗಳು ಕೂಗುವ ಶಬ್ಧ ಕೇಳಿ ಇಬ್ಬರು ‌ಪರಿಶೀಲಿಸಲು ಮುಂದದಾಗ ಆನೆ ಏಕಾಏಕಿ ದಾಳಿ‌ ನಡೆಸಿದೆ. ಇಬ್ಬರು ಆನೆಯಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದರು ಕೂಡ ಕ್ರೋಧಗೊಂಡಿದ್ದ ಆನೆ ಇಬ್ಬರ ಮೇಲೆಯೂ‌ ದಾಳಿ ನಡೆಸಿ ‌ಕೊಂದು ಹಾಕಿದೆ ಎಂದು ತಿಳಿದುಬಂದಿದೆ.

ಇಬ್ಬರನ್ನು‌ ಬಲಿ‌ಪಡೆದ ಆನೆ ಎಲ್ಲಿದೆ ಎತ್ತ ಹೋಗಿದೆ ಎಂಬ ಹುಡುಕಾಟಕ್ಕೆ ಶಿವಮೊಗ್ಗ ಸಕ್ರೆಬೈಲು ಆನೆಬೀಡಾರದ ತಜ್ಞರ ತಂಡವನ್ನು ಕರೆಸಿಕೊಳ್ಳಲಾಗಿದ್ದು, ಸುತ್ತಮುತ್ತಲಿನ ಕಾಂಡಚಿನ ಗ್ರಾಮೀಣ ಭಾಗದಲ್ಲಿ ಅರಣ್ಯ ಇಲಾಖೆ ಆನೆಗಳ ಬಗ್ಗೆ ನಿಗಾ ಇರಿಸಿದೆ.

ಪ್ರಸ್ತುತ ಈ ಭಾಗದಲ್ಲಿ ನಡೆದ ಮೊದಲ ಘಟನೆ ಇದಾಗಿದ್ದು, ವರ್ಷಕ್ಕೆ ಅಪರೂಪ ಎಂಬಂತೆ ಆನೆ ಓಡಾಟ ಇದ್ದರೂ ಇಷ್ಟೊಂದು ರೌದ್ರ ವರ್ತನೆ ಎಂದಿಗೂ ಆಗಿರಲಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *