Breaking
22 Mar 2026, Sun

ಬಂಗಾಡಿಯ ಅಂಗನವಾಡಿಯಲ್ಲಿ ಹಲವು ಸಮಸ್ಯೆ, ಬೇಕಿದೆ ಸೂಕ್ತ ವ್ಯವಸ್ಥೆ

ಬೆಳ್ತಂಗಡಿ: ತಾಲೂಕಿನ ಇಂದಬೆಟ್ಟುವಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬಂಗಾಡಿ 2ನೇ ವಾರ್ಡ್ ನಲ್ಲಿರುವ ಅಂಗನವಾಡಿ ಕೇಂದ್ರವೊಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.

ಸುಮಾರು 16 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಅಂಗನವಾಡಿ ಕೇಂದ್ರದಲ್ಲಿ ಆರಂಭದಲ್ಲಿ 20-25 ಮಕ್ಕಳಿದ್ದು ಸದ್ಯ ಆ ಸಂಖ್ಯೆ 10 ರಿಂದ 12ಕ್ಕೆ ಇಳಿಕೆ ಕಂಡಿದೆ. ಹಲವು ಸಮಯಗಳಿಂದ ಕುಡಿಯಲು ಹಾಗೂ ಶೌಚಾಲಯಕ್ಕೆ ನೀರೆ ಇಲ್ಲದಂತಹ ಸ್ಥಿತಿಯನ್ನು ಈ ಅಂಗನವಾಡಿ ಎದುರಿಸುತ್ತಿದೆ.

ಮಾತ್ರವಲ್ಲ ಪಂಚಾಯಿತಿಯಿಂದ ಬರುವ ನಳ್ಳಿ ನೀರು ಅಂಗನವಾಡಿ ವರೆಗೆ ತಲುಪುದೇ ಇಲ್ಲ. ಮಕ್ಕಳು ಶೌಚಾಲಯವಿದ್ದರು ನೀರಿಲ್ಲದ ಕಾರಣ ಅಂಗನವಾಡಿಯ ಹೊರಗಡೆ ಬರಬೇಕು. ಇದರ ಸುತ್ತಮುತ್ತ ಸರಿಯಾದ ಕಂಪೌಂಡ್ ಕೂಡ ಇಲ್ಲ.

ಬದಿಯಲ್ಲೆ ದೊಡ್ಡ ಹೊಂಡಗಳಿದ್ದು ಮಕ್ಕಳಿಗೆ ಅಪಾಯಕಾರಿಯಾಗಿದೆ. ಸುತ್ತಮುತ್ತ ಗೋಡೆ ಬದಿಯಲ್ಲೆ ಗಿಡ ಗಂಟಿಗಳು ಬೆಳೆದು ಹಾವು, ಹೆಗ್ಗಣಗಳ ವಾಸ ಸ್ಥಳವಾಗಿದೆ. ಸರಿಯಾದ ವ್ಯವಸ್ಥೆ ಇಲ್ಲದೆ ಪೊಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ.

Leave a Reply

Your email address will not be published. Required fields are marked *