Breaking
7 Aug 2026, Fri

ಧರ್ಮಸ್ಥಳದ ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಚಿತ ಆರೋಗ್ಯ ಪರೀಕ್ಷೆ

ಬೆಳ್ತಂಗಡಿ: ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕ ಹಾಗೂ ಜ್ಯೂನಿಯರ್ ರೆಡ್ ಕ್ರಾಸ್ ಧರ್ಮಸ್ಥಳ ಆಂಗ್ಲ ಮಾದ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂದು(ನ. 01) ಧರ್ಮಸ್ಥಳದ ಕೆಎಸ್‌ ಆರ್‌ ಟಿಸಿ ಡಿಪ್ಪೊದಲ್ಲಿ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷಾ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ಧರ್ಮಸ್ಥಳ ಕೆಎಸ್‌ ಆರ್‌ ಟಿಸಿ ಡಿಪ್ಪೊ ಮ್ಯಾನೇಜರ್ ರಮ್ಯ ಕೆ.ಎಮ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರಿದಾಸ್ ಎಸ್ .ಎಂ , ಕಾರ್ಯದರ್ಶಿ ಯಶವಂತ್ ಪಟವರ್ಧನ್ , ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಸದಸ್ಯರು , ಧರ್ಮಸ್ಥಳ ಆಂಗ್ಲ ಮಾದ್ಯಮ ಶಾಲೆಯ ಮುಖ್ಯ ಶಿಕ್ಷಕಿ ಪರಿಮಳ ಎಂ.ವಿ , ಸಹ ಶಿಕ್ಷಕರಾದ ಜ್ಯೋತಿ ಲಕ್ಷ್ಮಿ , ಸನ್ಮತಿ , ಜ್ಯೂನಿಯರ್ ರೆಡ್ ಕ್ರಾಸ್ ಧರ್ಮಸ್ಥಳ ಘಟಕದ ವಿದ್ಯಾರ್ಥಿಗಳು ಭಾಗವಹಿಸಿದ್ದರು .

ಕನ್ನಡ ರಾಜ್ಯೋತ್ಸವದ ಅಂಗವಾಗಿ ಧರ್ಮಸ್ಥಳ ಕೆಎಸ್‌ ಆರ್‌ ಟಿಸಿ ಡಿಪ್ಪೊದಲ್ಲಿರುವ ಸಿಬ್ಬಂದಿ , ಕೆಎಸ್‌ ಆರ್‌ ಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಉಚಿತ ರಕ್ತದೊತ್ತಡ , ಮಧುಮೇಹ ಪರೀಕ್ಷೆ ನಡೆಸಲಾಯಿತು.

Leave a Reply

Your email address will not be published. Required fields are marked *