ಬಾಗಲಕೋಟೆ: ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ರಾ. ಹೆ 218 ಸಮಿಪದ ಖಾನಾಪೂರ ಕಣಿವೆಯಲ್ಲಿ ಅ.31ರಂದು ನಡೆದಿದೆ.

ಕೆರೂರಗೆ ಹೊರಟಿದ್ದ ರಾಮದುರ್ಗ ತಾಲೂಕಿನ ಸೋರೆಬಾನ ಗ್ರಾಮದ ಸ್ವಿಫ್ಟ್ ಕಾರಿಗೆ, ಗುಲ್ಬರ್ಗದ ಜೇವರ್ಗಿ ಮೂಲದ ಇನೋವಾ ಕಾರು ವೇಗವಾಗಿ ಬಂದು ಚಾಲಕನ ಪಕ್ಕ ಬಲಭಾಗದಲ್ಲಿ ತೆರೆದುಕೊಂಡು ಹೋಗಿದೆ. ಘಟನೆ ವೇಳೆ ಸ್ವಿಫ್ಟ್ ಕಾರಿನಲ್ಲಿ 3 ಮತ್ತು ಇನೋವಾ ಕಾರಿನಲ್ಲಿ 6 ಮಂದಿ ಪ್ರಯಾಣಿಸುತ್ತಿದ್ದು ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಸ್ವಿಫ್ಟ್ ಕಾರು ಸ್ಥಳದಲ್ಲೇ ನಿಂತಿದ್ದು, ವೇಗವಾಗಿ ಹೊರಟಿದ್ದ ಇನೋವಾ ಕಾರು ಕಣಿವೆಯ ಡೌನಲ್‌ನಲ್ಲಿ ತಗ್ಗು-ದಿನ್ನೆಯಲ್ಲಿ ಜಿಗಿಯುತ್ತ 300ಮೀ. ನಷ್ಟು ದೂರದಲ್ಲಿ ಹೋಗಿ ಕಾಲುವೆಗೆ ಬಿದ್ದಿದೆ. ಬಳ್ಳಿಯೊಂದಕ್ಕೆ ಸಿಲುಕಿ ಇನೋವಾ ಕಾರು ವೇಗ ತಡೆದಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನೋವಾ ಕಾರು ಹಿಂಬದಿಯ ಬಾಗಿಲು ತೆರೆದು ಚಾಲಕ ಸೇರಿ 6 ಜನರೂ ಹೊರಗೆ ಬಂದಿದ್ದಾರೆ.
ಚಾಲಕನಿಗೆ ಮೂರ್ಛೆ ಬಂದು ಈ ಅವಘಡ ಸಂಭವಿಸಿದೆ ಎಂದು ಕಾರಿನಲ್ಲಿದ್ದವರು ತಿಳಿಸಿದ್ದಾರೆ. ಸ್ಥಳಿಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.




