ಉಡುಪಿ: ವ್ಯಕ್ತಿಯೊರ್ವರು ರಸ್ತೆ ದಾಟುತ್ತಿರುವಾಗ ಸ್ಕೂಟರ್ ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಉಡುಪಿಯ ನೇಜಾರು ಸಮೀಪ ಅ.29 ರ ಸಂಜೆ ವೇಳೆ ನಡೆದಿದೆ.
ಮೃತರು ಹೊನ್ನಾಳ ಬಿ.ಮೊಹಮ್ಮದ್ ಅಲಿ(67) ಎಂದು ತಿಳಿದು ಬಂದಿದೆ.

ಮಣಿಪಾಲದ ವಿದ್ಯಾರ್ಥಿಗಳಿಬ್ಬರು ಸ್ಕೂಟರ್‌ನಲ್ಲಿ ಹೂಡೆಯಿಂದ ಉಡುಪಿ ಕಡೆ ಹೋಗುತ್ತಿದ್ದು, ಈ ವೇಳೆ ರಸ್ತೆ ದಾಟುತ್ತಿದ್ದ ಮುಹಮ್ಮದ್ ಅಲಿಗೆ ಸ್ಕೂಟರ್ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



