Breaking
28 Jun 2026, Sun

ತುಂಬೆ ಗ್ರಾಮದ ವ್ಯಕ್ತಿ ನಾಪತ್ತೆ

ಬಂಟ್ವಾಳ: ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಘಟನೆ ನಡೆದಿದೆ.

ನಾಪತ್ತೆಯಾದ ವ್ಯಕ್ತಿಯನ್ನು ಬೊಳ್ಳಾರಿ ನಿವಾಸಿ ಚೆನ್ನಕೇಶವ ಅಲಿಯಾಸ್ ಕೇಶವ (37) ಎಂದು ಗುರುತಿಸಲಾಗಿದೆ.

ಅ. 25 ರಂದು ಮನೆಯಿಂದ ಕೆಲಸಕ್ಕೆಂದು ಹೊರಟ್ಟಿದ್ದ ಕೇಶವ ಲೈನ್‌ ಕೆಲಸ ಮುಗಿಸಿ ಮಧ್ಯಾಹ್ನ 2.30 ಗಂಟೆಗೆ ಪಂಪುವೆಲ್‌ನಲ್ಲಿ ಇಳಿದು ಇನ್ನೊಂದು ಕೆಲಸ ಮುಗಿಸಿ ಕಂಪೆನಿಗೆ ಬರುವುದಾಗಿ ತಿಳಿಸಿ ಹೋಗಿದ್ದರು. ನಂತರ ಮಧ್ಯಾಹ್ನ 3.30ಕ್ಕೆ ಅವರು ಅತ್ತಿಗೆಗೆ ಕರೆ ಮಾಡಿ ತಾನು ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುತ್ತಿದ್ದೇನೆ. ಮೊಬೈಲ್‌ನಲ್ಲಿ ಚಾರ್ಜ್‌ ಇಲ್ಲದ ಕಾರಣ ಸ್ವಿಚ್‌ಆಫ್ ಆಗಬಹುದು. ನಾಲ್ಕು ದಿನಗಳ ನಂತರ ಕರೆ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಈವರೆಗೆ ಕರೆ ಮಾಡಿಲ್ಲ ಎನ್ನಲಾಗಿದೆ.

ಚನ್ನಕೇಶವ ಸಂಬಂಧಿಕರ ಮನೆಗೂ, ಕಂಪೆನಿಗೂ , ಮನೆಗೂ ಬಾರದೆ ಕಾಣೆಯಾಗಿದ್ದಾರೆಂದು ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಣೆಯಾದ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 9535971261 ಈ ನಂಬರನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *