Breaking
28 Jun 2026, Sun

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು: ಓರ್ವ ಯುವಕ ಮೃತ್ಯು

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ವಿಭಾಜಗಕ್ಕೆ ಢಿಕ್ಕಿ ಹೊಡೆದು ಚಾಲಕ ಮೃತ ಪಟ್ಟು, ಇತರ ನಾಲ್ವರು ಗಾಯಗೊಂಡ ಘಟನೆ ತಾಲೂಕಿನ ಮೆಲ್ಕಾರ್ ನಲ್ಲಿ ಅಕ್ಟೋಬರ್ 28 ರಂದು ನಡೆದಿದೆ.

ಮೃತ ಯುವಕನನ್ನು ಕಡಬ ತಾಲೂಕಿನ ಸವಣೂರು ನಿವಾಸಿ ಕಾರ್ತಿಕ್(23) ಎಂದು ಗುರುತಿಸಲಾಗಿದೆ.
ಆತನ ಸ್ನೇಹಿತರಾದ ಸವಣೂರು ನಿವಾಸಿಗಳಾದ ಹರ್ಷಿತ್, ದೀಕ್ಷಿತ್, ಜಗದೀಶ್ ಮತ್ತು ನಿತಿನ್ ಗಾಯಗೊಂಡವರು ಎಂದು ಗುರುತಿಸಲಾಗಿದೆ.

ಕಾರ್ತಿಕ್ ಮತ್ತು ಆತನ ನಾಲ್ಕು ಮಂದಿ ಸ್ನೇಹಿತರು ಅಕ್ಟೋಬರ್ 28 ರಂದು ಮಂಗಳವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸಕ್ಕಾಗಿ ಸಂದರ್ಶನಕ್ಕೆ ಆಗಮಿಸಿದ್ದರು. ಸಂದರ್ಶನ ಮುಗಿಸಿ ಸಂಜೆ ವೇಳೆ ವಾಪಸ್ ಊರಿಗೆ ತೆರಳುತ್ತಿದ್ದ ವೇಳೆ ಮೆಲ್ಕಾರ್ ನ ಮೇಲೇತುವೆಯಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಢಿಕ್ಕಿ ಹೊಡೆದಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *