Breaking
28 Jun 2026, Sun

ಚೆನ್ನೈತ್ತೋಡಿಯ 70 ವರ್ಷದ ವಯೋವೃದ್ದ ನಾಪತ್ತೆ

ಬಂಟ್ವಾಳ: ಮನೆಯಿಂದ ಹೊರಟು ಹೋದವರು ಮನೆಗೆ ವಾಪಸ್‌ ಬರದೇ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ವಾಮದಪದವಿನಲ್ಲಿ ನಡೆದಿದೆ.

ನಾಪತ್ತೆಯಾದ ವ್ಯಕ್ತಿಯನ್ನು ಚೆನ್ನೈತ್ತೋಡಿ ಗ್ರಾಮದ ಅಂತರ ಗುತ್ತು ನಿವಾಸಿ ವಯೋವೃದ್ದ (70 ವ) ನಾರಾಯಣ ಕುಲಾಲ್ ಎಂದು ಗುರುತಿಸಲಾಗಿದೆ.

ಅಕ್ಟೋಬರ್‌ 18 ರಂದು ಅವರು ಮನೆಯಿಂದ ಹೊರಟು ಹೋದ ಬಳಿಕ ವಾಪಸ್‌ ಬರದೇ ನಾಪತ್ತೆಯಾಗಿದ್ದು, ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ನಾರಾಯಣ ಅವರು ಸುಮಾರು 5.5 ಅಡಿ ಎತ್ತರ, ಎಣ್ಣೆಕಪ್ಪು ಮೈ ಬಣ್ಣ, ಕಪ್ಪು-ಬಿಳಿ ಮಿಶ್ರಿತ ಕೂದಲು, ಕೋಲು ಮುಖ ಹೊಂದಿರುತ್ತಾರೆ. ತುಳು, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ಕಂದು ನೀಲಿ ಬಣ್ಣದ ಲುಂಗಿ, ನೀಲಿ ಗೆರೆಗಳಿರುವ ಬಣ್ಣದ ಅರ್ಧ ತೋಳಿನ ಶರ್ಟ್ ಧರಿಸಿದ್ದರು.

ನಾರಾಯಣ ಕುಲಾಲ್‌ ಬಗ್ಗೆ ಯಾವುದೇ ಮಾಹಿತಿ ದೊರಕಿದ್ದಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ವಿನಂತಿಸಲಾಗಿದೆ.

Leave a Reply

Your email address will not be published. Required fields are marked *