Breaking
23 Mar 2026, Mon

ಬಂಟ್ವಾಳ ಪುರಸಬೆಯ ಸಮಗ್ರ ಕುಡಿಯುವ ನೀರಿನ ಯೋಜನೆ: 2ನೇ ಹಂತದ ಕಾಮಗಾರಿ ಪ್ರಗತಿಯ ಕುರಿತು ಸಭೆ

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ ಹಂತದ ಕಾಮಗಾರಿ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು, ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಸಂಬಂಧಿಸಿ ಒಟ್ಟು 7 ವಲಯಗಳ ಪೈಕಿ 1ನೇ ವಲಯದ ಕಾಮಗಾರಿಯ ಪ್ರಗತಿ ಎಲ್ಲರಿಗೂ ತೃಪ್ತಿ ತಂದಿದೆ. 2ನೇ ವಲಯದ ಕಾಮಗಾರಿ ಪೂರ್ತಿಗೊಳಿಸಲು ನ. 16 ರ ವರೆಗೆ ಸಮಯಾವಕಾಶ ನೀಡಲಾಗಿದೆ. ಪುರಸಭಾ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆಗೆ ಈಗಾಗಲೇ ಅನುದಾನ ಬಿಡುಗಡೆಗೊಂಡಿದ್ದು, ಜಾಗದ ಸಮಸ್ಯೆಗಳನ್ನು ಸರಿ ಮಾಡುವುದಕ್ಕೆ ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ. ಒಟ್ಟು ಕಾಮಗಾರಿಯನ್ನು45 ಕೋ.ರೂ. ಹಾಗೂ 14.5 ಕೋ.ರೂ.ಗಳ ಎರಡು ವಿಭಾಗ ಮಾಡಿದ್ದೇವೆ. ಒಟ್ಟು 7 ವೆಟ್‌ವೆಲ್‌ಗಳ ಪೈಕಿ 5 ವೆಟ್‌ವೆಲ್‌ಗಳನ್ನು ಪೂರ್ತಿಗೊಳಿಸಲಾಗುತ್ತದೆ ಎಂದರು.

ಸಭೆಯಲ್ಲಿ ಬಂಟ್ವಾಳ ಪುರಸಭೆಯ ಅಧ್ಯಕ್ಷ ವಾಸು ಪೂಜಾರಿ, ಸದಸ್ಯರಾದ ಗೋವಿಂದ ಪ್ರಭು, ಹರಿಪ್ರಸಾದ್, ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಸಿ, ಮುಖ್ಯಾಧಿಕಾರಿ ಮತ್ತಡಿ, ನಗರ ನೀರು ಸರಬರಾಜು ಮಂಡಳಿಯ ಸಹಾಯಕ ಎಂಜಿನಿಯರ್ ಶೋಭಾಲಕ್ಷ್ಮೀ, ಪಿಡಿಎಂಸಿ ಎಂಜಿನಿಯರ್‌ಗಳಾದ ಹೇಮಂತ್, ಅನೀಶ್, ಪುರಸಭಾ ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *