Breaking
24 Jun 2026, Wed

ಉಪ್ಪಿನಂಗಡಿ ಸವಿ ಇಲೆಕ್ಟ್ರಾನಿಕ್ಸ್ ವಾರ್ಷಿಕೋತ್ಸವದ ಸವಿನೆನಪಿಗಾಗಿ ಆಯೋಜಿಸಲಾದ ಲಕ್ಕಿ ಕೂಪನ್ ನ ಬಹುಮಾನ ವಿತರಣೆ ಕಾರ್ಯಕ್ರಮ

ಉಪ್ಪಿನಂಗಡಿ : ಉಪ್ಪಿನಂಗಡಿ ಸವಿ ಇಲೆಕ್ಟ್ರಾನಿಕ್ಸ್ ವಾರ್ಷಿಕೋತ್ಸವದ ಸವಿನೆನಪಿಗಾಗಿ ಆಯೋಜಿಸಲಾದ ಲಕ್ಕಿ ಕೂಪನ್ ನ ಪ್ರಥಮ ಬಹುಮಾನ ವಿತರಣೆ ಕಾರ್ಯಕ್ರಮ ಅ.27 ರಂದು ನಡೆಯಿತು.

ಈ ಲಕ್ಕಿ ಕೂಪನ್ ನ ಪ್ರಥಮ ಬಹುಮಾನ 5 ಗ್ರಾಂ ಗೋಲ್ಡ್ ವಿಜೇತರಾದ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಶಾರದಾ ರಾಜೀವ್ ರೈ ಮುಗೆರೋಡಿ ಇವರಿಗೆ ಬಹುಮಾನವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸವಿ ಎಲೆಕ್ಟ್ರಾನಿಕ್ಸ್ ಮಾಲಕರಾದ ನವೀನ್ ಕುಮಾರ್, ಪ್ರಗತಿ ಎಲೆಕ್ಟ್ರಿಕಲ್ ಮಾಲಕರಾದ ರಾಘವ ಗೌಡ, ಸವಿ ಫೂಟ್ ವೇರ್ ಮಾಲಕರದ ಬಾಲಕೃಷ್ಣ ಗೌಡ ಮುಗೇರಡ್ಕ, ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಬಹುಮಾನ ವಿಜೇತರೆಲ್ಲರಿಗೂ ಅಭಿನಂದನೆಯನ್ನಿತ್ತು, ಗ್ರಾಹಕ ಬಂಧುಗಳ ಸಹಕಾರಕ್ಕೆ ಮಾಲಕರು ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *