Breaking
25 Sep 2026, Fri

ಬಾರ್ ನಲ್ಲಿ ಎಣ್ಣೆ ಜೊತೆಗೆ ಮಿಕ್ಸ್ಚರ್ ಕೊಡದಿದ್ದಕ್ಕೆ ಕ್ಯಾಷಿಯರ್‌ನ ಹತ್ಯೆ

ಕೋಲಾರ: ಕುಡಿಯಲು ಮಿಕ್ಸ್ಚರ್ ಕೊಡದಿದ್ದಕ್ಕೆ ಬಾರ್ ಕ್ಯಾಷಿಯರ್‌ನ್ನು ಹೆಂಡತಿ ಮಕ್ಕಳ ಎದುರೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದಲ್ಲಿ ನಡೆದಿದೆ.

ಹಾಸನ ಮೂಲದ ಕುಮಾರ್ (45) ಬರ್ಬರವಾಗಿ ಹತ್ಯೆಯಾದ ದುರ್ದೈವಿಯಾಗಿದ್ದಾನೆ. ಕೊಲೆಯಾದ ಕುಮಾರ್ ಲಕ್ಕೂರು ಗ್ರಾಮದ ಅಶೋಕ ವೈನ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಬಂದಿದ್ದ ಆರೋಪಿ ಕುಡಿಯುವ ವೇಳೆ, ಮಿಕ್ಸ್ಚರ್ ಕೇಳಿದ್ದು ನೀಡದ ಹಿನ್ನೆಲೆ ಗಲಾಟೆಯಾಗಿತ್ತು.

ಬಾರ್ ಬಂದ್ ಮಾಡಿ ಮನೆಗೆ ತೆರಳುತ್ತಿದ್ದ ಕುಮಾರ್‌ನನ್ನು ಆರೋಪಿ ಹಿಂಬಾಲಿಸಿದ್ದ. ಮನೆ ಬಳಿ ಬರುತ್ತಿದ್ದಂತೆ ಪತ್ನಿ, ಮಕ್ಕಳ ಎದುರೇ ಚುಚ್ಚಿ ಕೊಂದಿದ್ದಾನೆ.

ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *