ತೆಲಂಗಾಣ : ಬೀದಿ ನಾಯಿ ಕಚ್ಚಿದ ಒಂದು ತಿಂಗಳ ಬಳಿಕ ರೇಬಿಸ್ ಸೋಂಕಿನಿಂದ 10 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬಾಲ್ಕೊಂಡ ಮಂಡಲ ಕೇಂದ್ರದಲ್ಲಿ ನಡೆದಿದೆ.

ಲಕ್ಷಣ (10) ಮೃತ ಬಾಲಕಿ. ಒಂದು ತಿಂಗಳ ಹಿಂದೆ ಬಾಲಕಿ ಮೇಲೆ ಬೀದಿ ನಾಯಿ ದಾಳಿ ಮಾಡಿತ್ತು, ಆಕೆಯ ತಲೆ ಸೇರಿದಂತೆ ದೇಹದ ಕೆಲವೆಡೆ ಸಣ್ಣಪುಟ್ಟ ಗಾಯವಾಗಿತ್ತು. ಘಟನೆಯ ಬಳಿಕ ಬಾಲಕಿ ಈ ವಿಷಯವನ್ನು ತನ್ನ ಮನೆಯವರಿಗೆ ತಿಳಿಸಲಿಲ್ಲ.

ಆದರೆ, ಮೂರು ದಿನಗಳ ಹಿಂದೆ, ಮಗು ನಾಯಿಯಂತೆ ಬೊಗಳುತ್ತಾ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದ ಕಾರಣ ಕುಟುಂಬದ ಸದಸ್ಯರು ಮಗುವನ್ನು ನಿಜಾಮಾಬಾದ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.
ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಆಕೆಗೆ ತೀವ್ರ ರೇಬೀಸ್ ಇರುವುದು ಪತ್ತೆ ಮಾಡಿ, ಚಿಕಿತ್ಸೆಗಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ಅದರಂತೆ ಬಾಲಕಿಗೆ ಚಿಕಿತ್ಸೆ ನೀಡಲಾಗಿದ್ದು, ಆದರೆ ಆಕೆ ಮೃತಪಟ್ಟಿದ್ದಾಳೆ.




