Breaking
28 Jun 2026, Sun

ಮನೆಯ ಬಳಿಯ ಶೆಡ್ ನಲ್ಲಿ ನೇಣು ಬಿಗಿದು ಕೂಲಿ ಕಾರ್ಮಿಕ ಆತ್ಮಹತ್ಯೆ

ಕಾಸರಗೋಡು: ಕೂಲಿ‌ ಕಾರ್ಮಿಕ ಮನೆಯ ಬಳಿಯ ಶೆಡ್ ನಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕಾಸರಗೋಡುವಿನ ಕುಂಬಳೆಯಲ್ಲಿ ನಡೆದಿದೆ.

ಮೃತರನ್ನು ಕುಂಬಳೆ ಕುಂಟಂಗೇರಡ್ಕ ನಿವಾಸಿ ವಿನಯ ಕುಮಾರ್ (44) ಎಂದು ಗುರುತಿಸಲಾಗಿದೆ.

ಕುಂಟಂಗೇರಡ್ಕ ಐ.ಎಚ್.ಆರ್.ಡಿ.ಕಾಲೇಜಿನ ಬಳಿಯಿರುವ ಶೆಡ್ ನಲ್ಲಿ ಇವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಹಗ್ಗ ತುಂಡರಿಸಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ.

‌ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

ಈ ಬಗ್ಗೆ ಕುಂಬಳೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *