Breaking
28 Jun 2026, Sun

ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡುವಾಗ ಚರಂಡಿಗೆ ಉರುಳಿದ ಕಾರು

ಕಾರ್ಕಳ: ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡುವ ವೇಳೆ ಕಾರೊಂದು ಚರಂಡಿಗೆ ಉರುಳಿದ ಘಟನೆ ಕಾರ್ಕಳದ ಕಾಬೆಟ್ಟುವಿನಲ್ಲಿ ಅ. 27ರಂದು ನಡೆದಿದೆ.

ಕಾರು ಬೈಪಾಸ್ ರಸ್ತೆಯಿಂದ ಕಾಬೆಟ್ಟು ಕಡೆಗೆ ಸಾಗುತ್ತಿದ್ದು, ಎದುರಿನಲ್ಲಿ ಬಂದ ವಾಹನಕ್ಕೆ ಸೈಡ್ ಕೊಡುವಾಗ ಹುಲ್ಲಿನಿಂದ ಆವೃತವಾದ ಚರಂಡಿ ಚಾಲಕನ ಗಮನಕ್ಕೆ ಬಾರದ ಪರಿಣಾಮವಾಗಿ ಕಾರು ಚರಂಡಿಗೆ ಉರುಳಿದೆ ಎಂದು ತಿಳಿದು ಬಂದಿದೆ.

ಅದೃಷ್ಟವಶಾತ್ ಅಪಘಾತದಲ್ಲಿ ಯಾರಿಗೂ ಯಾವುದೇ ಅಪಾಯವಾಗಿಲ್ಲ.

Leave a Reply

Your email address will not be published. Required fields are marked *