Breaking
23 Mar 2026, Mon

ಮನೆ ಹಿಂಭಾಗದ ಗ್ರಿಲ್ಸ್ ಮುರಿದು 20 ಪವನ್ ಚಿನ್ನಾಭರಣ ಕಳವು

ಕಾಸರಗೋಡು: ಮನೆಯ ಹಿಂಭಾಗದ ಕಬ್ಬಿಣದ ಗ್ರಿಲ್ಸ್ ತುಂಡರಿಸಿ ಬೀಗ ಮುರಿದು ಒಳನುಗ್ಗಿದ ಕಳ್ಳರು 20 ಪವನ್ ಚಿನ್ನಾಭರಣ ಕಳವುಗೈದ ಘಟನೆ ಕಾಸರಗೋಡುವಿನ ಕುಂಬಳೆಯಲ್ಲಿ ನಡೆದಿದೆ.

ಪೆರ್ಮುದೆ, ಪೆರಿಯಡ್ಕ ಮಂಜಾಡಿಯ ಶರೀಫ್ ಎಂಬವರಿಗೆ ಸೇರಿದ ಮನೆಯಿಂದ ಕಳವು ನಡೆದಿದ್ದು,ಶರೀಫ್ ದುಬೈಯಲ್ಲಿದ್ದಾರೆ.

ಪತ್ನಿ ಮತ್ತು ಮಕ್ಕಳು 2 ದಿನಗಳ ಹಿಂದೆ ಸಂಬಂಧಿಕರ ಮನೆಗೆ ಹೋಗಿದ್ದು, ಅ.26ರ ಸಾಯಂಕಾಲ ಹಿಂತಿರುಗಿದ್ದರು. ಈ ವೇಳೆ ಕಳವು ಪ್ರಕರಣ ಬೆಳಕಿಗೆ ಬಂದಿದ್ದು,ಮನೆಯ ಒಳಗೆ ಪ್ರವೇಶಿಸಿದ ಕಳ್ಳರು ಕಪಾಟು ಮುರಿದು ಅದರೊಳಗಿದ್ದ ಚಿನ್ನಾಭರಣ ದೋಚಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕುಂಬಳೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *