Breaking
23 Mar 2026, Mon

ಗಂಗೊಳ್ಳಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯ ಅಕ್ರಮ ಸಾಗಾಟ, ಲಾರಿ ಸಹಿತ ಅಕ್ಕಿ ವಶಕ್ಕೆ

ಕುಂದಾಪುರ: ಸರಕಾರದ ಉಚಿತ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಗಂಗೊಳ್ಳಿ ಠಾಣೆಯ ಪೊಲೀಸರು ಬೇಧಿಸಿದ್ದಾರೆ.

ಈ ವೇಳೆ ಅಧಿಕಾರಿಗಳು ಲಾರಿಯಲ್ಲಿ ಚಾಲಕ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಲ್ಯಾಣಪುರ ಸೋಲೂರು ಹೋಬಳಿ ನಂಜುಂಡ ಕೆ.ಆರ್ (28) ಎಂಬಾತನನ್ನು ಲಾರಿಯಲ್ಲಿರುವ ಲೋಡಿನ ಬಗ್ಗೆ ವಿಚಾರಿಸಿದಾಗ ಅಕ್ಕಿಯ ಚೀಲ ಎಂಬುದಾಗಿ ತಿಳಿಸಿದ್ದು ಭಟ್ಕಳದ ಶಫೀಕ್ ಸಾಹೇಬ್ ಎನ್ನುವವರು ತನ್ನ ಲಾರಿ 214 ಚೀಲ ಗಳಲ್ಲಿ ಒಟ್ಟು 107 ಕ್ವಿಂಟಾಲ್ ಅಕ್ಕಿಯನ್ನು ಲಾರಿಗೆ ತುಂಬಿಸಿ ಲೋಡ್ ಮಾಡಿದ್ದಾರೆ. ಇದನ್ನು ಶ್ರೀ ಬಸವೇಶ್ವರ ಅಗ್ರೋ ರೈಸ್ ಇಂಡಸ್ಟ್ರೀಸ್ 2 ನೇ ಅಡ್ಡ ರಸ್ತೆ ಎಂ. ಜಿ. ರಸ್ತೆ ಮಂಡ್ಯ ಎನ್ನುವವರ ರೈಸ್ ಮಿಲ್ಲಿಗೆ ತಲುಪಿಸಲು ಕಳುಹಿಸಿದ್ದು ಹೇಳಿದ್ದಾರೆ ಎಂಬುದಾಗಿ ತಿಳಿಸಿದ್ದಾನೆ.

ಕುಂದಾಪುರ ಆಹಾರ ನಿರೀಕ್ಷಕ ಸುರೇಶ್ ಹೆಚ್.ಎಸ್ ಅವರಿಗೆ ಅ. 24 ರಂದು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿ ಗ್ರಾಮದ ಬೀಚ್ ಹತ್ತಿರದ ಕ್ರಾಸ್ಬಳಿ ಬೈಂದೂರು – ಕುಂದಾಪುರ ರಾ.ಹೆ-66ರ ಬಳಿಯ ರಸ್ತೆಯಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ರವಾನಿಸುತ್ತಿರುವ ಬಗ್ಗೆ ಖಚಿತ ಮಾಹಿತಿಯೊಂದು ಬಂದಿದೆ. ಅದರಂತೆ ಗಂಗೊಳ್ಳಿ ಪೊಲೀಸ್ ಠಾಣಾ ಸಂಬಂಧಿಸಿದ ದಾಳಿ ನಡೆಸಿ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಿಂದ 107 ಕ್ವಿಂಟಾಲ್ ಅಕ್ಕಿಯನ್ನು ಅಂದಾಜು 2,56,800/- ರೂ. ,ಸಾಗಾಟ ಮಾಡಲು ಬಳಿಸಿದ ಲಾರಿ, ಟಾಟಾ ಕಂಪೆನಿಯ ಲಾರಿಯನ್ನು ಅಂದಾಜು ಮೌಲ್ಯ 11,00,000/ ರೂ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *