Breaking
19 Sep 2026, Sat

ಚಪ್ಪಲಿಯೊಳಗೆ ಅವಿತುಕೊಂಡಿದ್ದ ಹಾವು ಕಚ್ಚಿ ಮಹಿಳೆ ಆಸ್ಪತ್ರೆಗೆ ದಾಖಲು

ಸುಳ್ಯ: ಚಪ್ಪಲಿಯೊಳಗೆ ಅವಿತುಕೊಂಡಿದ್ದ ಹಾವು ಕಚ್ಚಿ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೊಳ್ಚಾರು ಎಂಬಲ್ಲಿ ನಡೆದಿದೆ.

ಹಾವು ಕಚ್ಚಿಸಿಕೊಂಡ ಮಹಿಳೆಯನ್ನು ವಿನುತಾ ಎಂದು ಗುರುತಿಸಲಾಗಿದೆ. ಬೆಳಗಿನ ಜಾವ ಮನೆಯ ಹೊರಗಡೆ ಇರಿಸಲಾಗಿದ್ದ ಚಪ್ಪಲಿಯನ್ನು ಹಾಕುವ ವೇಳೆ ಅದರೊಳಗೆ ಅವಿತುಕೊಂಡಿದ್ದ ಹಾವು ಅವರ ಗಮನಕ್ಕೆ ಬರದೇ ಈ ಘಟನೆ ನಡೆದಿದೆ.

ಘಟನೆಯ ನಂತರ ತಕ್ಷಣವೇ ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *