Breaking
23 Mar 2026, Mon

ನ.1ರಂದು ಅಮ್ಟೂರಿನ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ದೇವರ ನೂತನ ಕಟ್ಟೆಯಲ್ಲಿ ಅಶ್ವಥ ಉದ್ಯಾಪನೆ -ಕಟ್ಟೆಪೂಜೆ ಕಾಯ೯ಕ್ರಮ

ಬಂಟ್ವಾಳ: ತಾಲೂಕಿನ ಶ್ರೀ ನಿಟಿಲಾಕ್ಷ ಲಕ್ಷದೀಪೋತ್ಸವ ಸಮಿತಿ ಅಮ್ಟೂರು ಹಾಗೂ ಹರೇಕೃಷ್ಣ ಭಕ್ತವೃಂದ ಅಮ್ಟೂರು ಇವರ ಸಾರಥ್ಯದಲ್ಲಿ ಇದೀಗ ನವೀಕರಣಗೊಂಡ ಅಮ್ಟೂರಿನ ನಿಟಿಲಾಕ್ಷ ಸದಾಶಿವ ದೇವರ ನೂತನ ಕಟ್ಟೆಯಲ್ಲಿ, ಅಶ್ವಥ ಉದ್ಯಾಪನೆ -ಕಟ್ಟೆಪೂಜೆ – ಸಂಕೀರ್ತನೆ ನ.1 ರಂದು ಶನಿವಾರ ಬೆಳಿಗ್ಗೆ 5 ರಿಂದ ರಾತ್ರಿ 10 ರ ತನಕ ನಡೆಯಲಿದೆ.

ಆ ಪ್ರಯುಕ್ತ ದಿನಾಂಕ ಅ. 31 ರಂದು ಸಂಜೆ 5:30 ರಿಂದ ಪುಣ್ಯಹ ಪಂಚಗವ್ಯ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಪೂಜೆ ವಾಸ್ತು ಬಲಿ ವಾಯಶೋಚಿಷ್ಟಜ ಶಾಂತಿ ಹಾಗೂ ನ.1 ರಂದು ಬೆಳಿಗ್ಗೆ 5 ರಿಂದ ಆಧ್ಯ ಗಣಯಾಗ, ಅಶ್ವತ್ಥ ಉಧ್ಯಾಪನ ಕಲಶ ಪ್ರತಿಷ್ಠೆ ಸ್ವಸ್ತಿಕ ಪೂಜೆ, ಫಲ ಪಂಚಾಮೃತ ಅಭಿಷೇಕ ಅಶ್ವತ್ಥ ಕಲ್ಪೋಕ್ತ ಪೂಜೆ, ಮಧ್ಯಾಹ್ನ 12:30 ಕ್ಕೆ ಮಹಾಪೂಜೆ ನಡೆಯಲಿದೆ.

ಬೆಳಿಗ್ಗೆ ಸೂರ್ಯೋದಯದಿಂದ ರಾತ್ರಿ ಕಟ್ಟೆಪೂಜೆ ಸಂಪನ್ನದವರೆಗೆ ವಿವಿಧ ಊರ- ಪರವೂರ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, ಆ ದಿನ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಲಿದೆ.

ಭಕ್ತ ಮಹಾಶಯರು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ದೇವಳಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *