Breaking
23 Mar 2026, Mon

ಸುಳ್ಯದ ಪದವಿನ ದೇವಸ್ಯದಲ್ಲಿ ಕೆಂಪು ಕಲ್ಲು ಹೇರಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ

ಸುಳ್ಯ : ಕೆಂಪು ಕಲ್ಲುಗಳನ್ನು ಲೋಡ್ ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಲಾರಿ ಚಾಲಕ, ಕ್ಲಿನರ್ ಪ್ರಾಣಾಪಾಯದಿಂದ ಪಾರಾದ ಘಟನೆ ಕೇರಳ ಕರ್ನಾಟಕದ ಗಡಿಭಾಗದ ಸುಳ್ಯ ತಾಲೂಕಿನ ಪದವಿನ ದೇವಸ್ಯ ಎಂಬಲ್ಲಿ ಅ.24 ರಂದು ಸಂಜೆ ನಡೆದಿದೆ.

ಮಿಂಚಿ ಪದವು ಪ್ರದೇಶದ ಕಲ್ಲಿನ ಕೋರೆಯಿಂದ ಕರ್ನಾಟಕ ಪ್ರದೇಶಕ್ಕೆ ಕೆಂಪು ಕಲ್ಲು ಲೋಡ್ ಮಾಡಿ ಕೊಂಡು ಬಂದ ಲಾರಿ ದೇವಸ್ಯ ಸೇತುವೆ ಬಳಿ ವೇಗವಾಗಿ ಬರುತ್ತಿದ್ದಾಗ ಕಾರೊಂದಕ್ಕೆ ಸೈಡ್ ಕೊಡುವ ವೇಳೆ ರಸ್ತೆ ಬದಿಯ ತೋಟ ಕ್ಕೆ ಉರುಳಿ ಬಿದ್ದು ಪಲ್ಟಿ ಯಾಗಿದೆ. ಈ ವೇಳೆ ಲಾರಿ ಚಾಲಕ, ಕ್ಲಿನರ್ ಲಾರಿಯಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರಿನಲ್ಲಿ ಮಕ್ಕಳು ಸೇರಿದಂತೆ ಆರು ಮಂದಿ ಪ್ರಯಾಣಿಸುತ್ತಿದ್ದರು ರಸ್ತೆ ಇಕ್ಕೆಲುಗಳು ಅಪಾಯಕಾರಿ ಇರುವುದರಿಂದ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *