Breaking
19 Sep 2026, Sat

ಸಜೀಪ ಮಾಗಣೆ ಆಲಾಡಿ ಖಾನ ಅಗರಿ ಜೀರ್ಣೋದ್ಧಾರಕ್ಕಾಗಿ ವಿಜ್ಞಾಪನ ಪತ್ರ ಬಿಡುಗಡೆ

ಬಂಟ್ವಾಳ: ಸಜೀಪ ಮಾಗಣೆ ಆಲಾಡಿ ಖಾನ ಅಗರಿಯಲ್ಲಿ ಮಾಡ ಜೀರ್ಣೋದ್ಧಾರ ಅಂಗವಾಗಿ ವಾಸ್ತು ಪ್ರಕಾರ ಶಿಲಾಮಯ, ನೂತನ ಮಾಡ ತೀರ್ಥಭಾವಿ, ಎದುರು ಭಾಗದ ಗೋಪುರ ಹಾಗೂ ಮುಂಭಾಗದ ನೂತನ ಮೆಟ್ಟಿಲುಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ನಿರ್ಮಾಣಕ್ಕೆ ಊರ ಪರವೂರ ನೆರವು ಪಡೆಯಲು ವಿಜ್ಞಾಪನ ಪತ್ರವನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅವರು ಮಿತ್ತಮಜಲು ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕಾಂತಾಡಿ ಗುತ್ತು ಗಡಿ ಪ್ರಧಾನರಾದ ಗಣೇಶ ನಾಯಕ್ ಯಾನೆ ಉಗ್ಗ ಶೆಟ್ಟಿ ಜೀರ್ಣೋದ್ಧಾರ ಕಾರ್ಯಕ್ಕೆ ದೇಣಿಗೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾಡದಾರು ಗುತ್ತು ಗಡಿ ಪ್ರಧಾನರಾದ ನಾರಣ ಆಳ್ವ , ನಗ್ರಿ ಗುತ್ತು ವಿವೇಕಶೆಟ್ಟಿ , ಶಿವಪ್ರಸಾದ್ ಶೆಟ್ಟಿ ಬರಂಗರೆ, ಹರೀಶ ರೈ, ಜೀವನ್ ಆಳ್ವ , ಗಣೇಶ ಶೆಟ್ಟಿ, ದೇವಿ ಪ್ರಸಾದ್ ಪೂoಜ, ಪ್ರೀತಂ ಪೂಂಜ, ಕೊಚು ಪೂಜಾರಿ ಯಾನೆ ಶಂಕರ ಪೂಜಾರಿ, ದಯಾನಂದ ಪೂಜಾರಿ ಯಾನೆ ಕು oಜ್ಞ ಪೂಜಾರಿ, ಅನುಪ್ ಆಳ್ವ , ಸತೀಶ್ ಶೆಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *