Breaking
23 Mar 2026, Mon

ಸುಳ್ಯದ ಅರಂತೋಡಿನಲ್ಲಿ ಎರಡು ಸ್ಕೂಟಿಗಳ ಅಪಘಾತ, ಸ್ಕೂಟಿಗಳು ಜಖಂ

ಸುಳ್ಯ: ಎರಡು ಸ್ಕೂಟಿಗಳ ಅಪಘಾತ ಸಂಭವಿಸಿ ನಡುವೆ ಸ್ಕೂಟಿಗಳು ಜಖಂಗೊಂಡಿರುವ ಘಟನೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಅ.24ರಂದು ನಡೆದಿದೆ.

ಕಾಸರಗೋಡು ಮೂಲದ ಕಬೀರ್ ಎಂಬವರು ಮಡಿಕೇರಿಯಿಂದ ಕಾಸಗೋಡಿಗೆ ತೆರಳುತ್ತಿದ್ದಾಗ ತೊಡಿಕಾನ ಕಡೆಯಿಂದ ಬರುತ್ತಿದ್ದ ಅಡ್ಯಡ್ಕ ಸಿ.ಆರ್.ಸಿ ಕಾಲೋನಿ ನಿವಾಸಿ ಗುಣಶೀಲ ಅವರ ಸಹೋದರ ದೊರೈಸ್ವಾಮಿ .ಪಿ ಅವರ ಸ್ಕೂಟಿ ನಡುವೆ ಈ ಅಪಘಾತ ಸಂಭವಿಸಿದೆ.

ಪರಿಣಾಮವಾಗಿ ಸ್ಕೂಟಿ ಸವಾರರು ಸಣ್ಣ ಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ. ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *