Breaking
25 Sep 2026, Fri

ಕಸ ಬಿಸಾಕಿದವರಿಂದಲೇ ಕಸ ತೆಗಿಸಿದ ಗ್ರಾಮ ಪಂಚಾಯತ್ ಸದಸ್ಯ

ಕುಂದಾಪುರ: ಬಿಸಾಕಿದವರಿಂದಲೇ ಕಸ ತೆಗೆಸಿ ಸ್ವಚ್ಛಗೊಳಿಸಿ ದಂಡ ವಿಧಿಸಿದ ಘಟನೆ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಕಾಳಾವರ ಗ್ರಾಮದಲ್ಲಿ ರೈಲ್ವೆ ಸೇತುವೆ ಮೇಲ್ಗಡೆ ರಸ್ತೆ ಬದಿಯಲ್ಲಿ ಕಸ ಬಿಸಾಡಿದ ಘಟನೆ ಬೆಳಕಿಗೆ ಬಂದ ತಕ್ಷಣ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಶೆಟ್ಟಿ ಅವರ ನೇತೃತ್ವದಲ್ಲಿ ಕಸ ಬಿಸಾಡಿದ ವ್ಯಕ್ತಿಯನ್ನು ಪಂಚಾಯತ್ ಕಚೇರಿಗೆ ಕರೆಸಿ, ಅವರಿಗೆ ದಂಡ ವಿಧಿಸಿ, ಅದೇ ಕಸವನ್ನು ಸಂಜೆ ಅವರಿಂದಲೇ ಸ್ವಚ್ಛಗೊಳಿಸಲಾಯಿತು.

ಘಟನೆಯಲ್ಲಿ ಸಹಕರಿಸಿದ ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯವರಿಗೆ ಜಯಪ್ರಕಾಶ್ ಶೆಟ್ಟಿ ಧನ್ಯವಾದಗಳು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *