Breaking
21 Jun 2026, Sun

ಮಾದಕವಸ್ತು ಎಂಡಿಎಂಎ ಮಾರಾಟ ಪ್ರಕರಣ ಬೇಧಿಸಿದ ಚಂದೇರ ಠಾಣೆಯ ಪೊಲೀಸರು

ಕಾಸರಗೋಡು: ಮಾದಕವಸ್ತುಎಂಡಿಎಂಎ ಮಾರಾಟ ಪ್ರಕರಣವನ್ನು ಕಾಸರಗೋಡುವಿನ ಚಂದೇರ ಠಾಣೆಯ ಪೊಲೀಸರು ಬೇಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಡಂಗೋಡು ನಿವಾಸಿ ಮುಹಮ್ಮದ್ ನವಾಜ್(33) ಎಂಬಾತನನ್ನು ಬಂಧಿಸಲಾಗಿದ್ದು, ಈತನಿಂದ 1.03 ಗ್ರಾಂಎಂಡಿಎಂಎ ಅನ್ನು ವಶಕ್ಕೆ ಪಡೆಯಲಾಗಿದೆ.

ಈತ ಪೊಲೀಸರನ್ನು ಕಂಡಾಗ ಚೆರ್ವತ್ತೂರಿನ ಹೋಟೆಲು ಒಂದರ ಪಕ್ಕದಲ್ಲಿ ಶಂಕಿತ ರೀತಿಯಲ್ಲಿ ನಿಂತಿದ್ದ ಎನ್ನಲಾಗಿದೆ. ಈತನ ಚಲನವಲನ ಕಂಡು ಕೈಯಲ್ಲಿದ್ದ ಬ್ಯಾಗ್ ಪರಿಶೋಧಿಸಿದಾಗ ಎಂಡಿಎಂಎ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *