ಬಂಟ್ವಾಳ : ನಡುಮೊಗರು ಶಾಲಾ ಸೇವಾ ನಿಧಿ ತಂಡ ನಡುಮೊಗರು ಮಣಿನಾಲ್ಕೂರು ಬಂಟ್ವಾಳ ಇದರ ಆಶ್ರಯದಲ್ಲಿ ರಾಜಯೋಗ ಸರಪಾಡಿ ಇವರ ಸಹಭಾಗಿತ್ವದಲ್ಲಿ ಅಕ್ಟೋಬರ್ 19 ಶನಿವಾರದಂದು ಸಂಜೆ 6ರಿಂದ ಹೊನಲು ಬೆಳಕಿನ ಪುರುಷರ ಪ್ರೊ ಮಾದರಿಯ 65 ಕೆಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಉತ್ಸವ -2024 ನಡುಮೊಗರು ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಂದ್ಯಾಕೂಟ 700ರೂ ಪ್ರವೇಶ ಶುಲ್ಕದೊಂದಿಗೆ ಪ್ರಥಮ 10ಸಾವಿರ ಹಾಗೂ ಟ್ರೋಫಿ, ದ್ವಿತೀಯ 6ಸಾವಿರ ಹಾಗೂ ಟ್ರೋಫಿ, ತೃತೀಯ 3ಸಾವಿರ ಹಾಗೂ ಟ್ರೋಫಿ, ಚತುರ್ಥ 2ಸಾವಿರ ಹಾಗೂ ಟ್ರೋಫಿಯೊಂದಿಗೆ ಬಹುಮಾನ ನೀಡಲಿದೆ.
ಮೊಟ್ಟ ಮೊದಲ ಬಾರಿಗೆ ನಿರೂಪಣೆಯಲ್ಲಿ ಕಂಬಳ ನಿರೂಪಕರಾದ ರಾಜೀವ ಶೆಟ್ಟಿ ಎಡ್ತೂರು, ವಿಜಯ್ ಅತ್ತಾಜೆ, ಪ್ರಖ್ಯಾತ್ ಭಂಡಾರಿ ಬೆಳುವಾಯಿ, ರಾಜೀವ ಕಕ್ಯ ಪದವು ಭಾಗವಹಿಸಲಿದ್ದಾರೆ ಎಂದು ಪಂದ್ಯಾಕೂಟದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.