ಬಂಟ್ವಾಳ: ತಾಲೂಕಿನ ಬಂಟರ ಭವನದಲ್ಲಿ ಆಯೋಜಿಸಿದ್ದ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆಯ ಜನಪ್ರತಿನಿಧಿಗಳ ಸಮಾವೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು “ವಿಧಾನ ಪರಿಷತ್ ಉಪಚುನಾವಣೆಗೆ ಬಿಜೆಪಿಯು ಯುವ ಕಾರ್ಯಕರ್ತ ಕಿಶೋರ್ ಕುಮಾರ್ ಪುತ್ತೂರು ಅವರಿಗೆ ಅವಕಾಶ ಕಲ್ಪಿಸಿದ್ದು, ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿ ದೊಡ್ಡ ಅಂತರದಿಂದ ಗೆಲುವು ಸಾಧಿಸಲು ವಿರಮಿಸದೇ ಶ್ರಮಿಸಬೇಕು,ಈ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರನ್ನು ಗೆಲ್ಲಿಸಿಕೊಡಿ, ಅವರು ದ.ಕ.ಉಡುಪಿ ಜಿಲ್ಲೆಯ ಧ್ವನಿಯಾಗಿ ,ಸಜ್ಜನಿಕೆಯ ರಾಜಕಾರಣಿಯ ಸ್ಥಾನವನ್ನು ತುಂಬುವ ಕಾರ್ಯ ಮಾಡುತ್ತಾರೆ” ಎಂದರು.
ಪ್ರಾಮಾಣಿಕವಾಗಿ ಪಕ್ಷದಲ್ಲಿ ದುಡಿಯಬೇಕಾದರೆ, ಹಿಂದುತ್ವದ ಪ್ರೇರಣೆ ಸಿಗಬೇಕಾದರೆ ದ.ಕ.ಜಿಲ್ಲೆಯ ಕಾರ್ಯಕರ್ತರನ್ನು ಮಾತನಾಡಿಸಬೇಕು ಎಂದು ಅವರು ಹೇಳಿದರು. ಹೀಗಾಗಿ ದ.ಕ.ಜಿಲ್ಲೆಗೆ ಪ್ರವಾಸ ಕೈಗೊಳ್ಳುವುದೆಂದರೆ ಅತ್ಯಂತ ಸಂತಸ ಎಂದು ತಿಳಿಸಿದರು.
ಬಿಜೆಪಿ ಸರಕಾರ ಆಡಳಿತದಲ್ಲಿರುವಾಗ ಗ್ರಾ.ಪಂ.ಗೆ ವಿಶೇಷ ಅನುದಾನ ನೀಡುವ ಮೂಲಕ ಗೌರವ ತರುವ ಕಾರ್ಯ ಮಾಡಿದ್ದೇವೆ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ರಾಜ್ಯ ಸರಕಾರ ಪಾಪರ್ ಅಗಿಬಿಟ್ಟಿದ್ದು,ಅನುದಾನ ಎಂಬುದು ಮರೀಚಿಕೆ ಆಗಿದೆ.ಎಲ್ಲಿಯವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿರುತ್ತಾರೊ ಅಲ್ಲಿಯವರೆಗೆ ಅನುದಾನ ಕನಸಿನ ಮಾತು ಎಂದು ಅವರು ತಿಳಿಸಿದರು. ಸಿದ್ದರಾಮಯ್ಯ ಅವರ ಜೊತೆ ಬೆಂಬಲಿಗರು ಸಾವಿರಕ್ಕೂ ಅಧಿಕ ಸೈಟ್ ನುಂಗಿದ್ದಾರೆ ಎಂದು ಆರೋಪ ಮಾಡಿದರು.
ಪಕ್ಷದ ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಮಾತನಾಡಿ ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದೆ ಎಂದು ಅವರು ತಿಳಿಸಿದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ ರಾಜ್ಯದ ನಾಯಕತ್ವ ತೆಗೆದುಕೊಂಡಿರುವ ನಿರ್ಧಾರಕ್ಕೆ ಬದ್ದವಾಗಿದ್ದುಕೊಂಡು, ನರೇಂದ್ರ ಮೋದಿಯವರಿಗೆ ಶಕ್ತಿ ತುಂಬಿಸುವುದಕ್ಕೆ ಅಭೂತಪೂರ್ವವಾಗಿ ಕಿಶೋರ್ ಕುಮಾರ್ ಪುತ್ತೂರು ಅವರನ್ನು ಗೆಲ್ಲಿಸಿಕೊಡಬೇಕು ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಎರಡು ಸಾವಿರ ಅಂತರದಲ್ಲಿ ಕಿಶೋರ್ ಅವರು ಆಯ್ಕೆಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ.ವಿ. ಸದಾನಂದಗೌಡ ಪಕ್ಷದ ರಾಜ್ಯ ಸಹ ಉಸ್ತುವಾರಿಗಳಾದ ಶ್ರೀ ಸುಧಾಕರ್ ರೆಡ್ಡಿ , ವಿರೋಧ ಪಕ್ಷ ನಾಯಕರಾದ ಶ್ರೀ ಆರ್ ಅಶೋಕ್ , ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ,ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್,ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್,ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ. ಬ್ರಿಜೇಶ್ ಚೌಟ ಶಾಸಕರಾದ ಶ್ರೀ ರಾಜೇಶ್ ನೈಕ್ ಉಳಿಪ್ಪಾಡಿ , ಶ್ರೀ ಉಮಾನಾಥ್ ಕೋಟ್ಯಾನ್ , ಡಾ.ವೈ ಭರತ್ ಶೆಟ್ಟಿ , ಶ್ರೀ ವೇದವ್ಯಾಸ್ ಕಾಮತ್ , ಶ್ರೀಹರೀಶ್ ಪೂಂಜ, ಕು. ಭಾಗೀರಥಿ ಮುರುಲ್ಯ , ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅಭ್ಯರ್ಥಿ ಶ್ರೀ ಕಿಶೋರ್ ಕುಮಾರ್ ಪುತ್ತೂರು , ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ,ಪ್ರಭಾರಿ ಉದಯಕುಮಾರ್ ಶೆಟ್ಟಿ, ಸಹ ಪ್ರಭಾರಿ ರಾಜೇಶ್ ಕಾವೇರಿ , ಜಾಕೆ ಮಾದವಗೌಡ, ಮೇಯರ್ ಮನೋಜ್, ಉಪಮೇಯರ್ ಭಾನುಮತಿ , ಪ್ರಮುಖರಾದ ಯತೀಶ್ ಅರ್ವಾರ್,ಪ್ರೇಮನಾಥ ಶೆಟ್ಟಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಬೂಡ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ ಬಂಟ್ಚಾಳ ಕಾರ್ಯಕ್ರಮ ನಿರೂಪಿಸಿದರು.