Breaking
23 Dec 2024, Mon

ರೋಟರಿ ಕ್ಲಬ್ ಬಂಟ್ವಾಳ ಲೋರೆಟ್ಟೊ ಹಿಲ್ಸ್ ಪ್ರಾಯೋಜಕತ್ವದಲ್ಲಿ ಸಬ್ ಜೂನಿಯರ್ ಕೋಣಗಳ “ರೋಟರಿ ಕಂಬಳ”

ಬಂಟ್ವಾಳ:ಇದೇ ಪ್ರಥಮ ಬಾರಿಗೆ ಅವಿಭಜಿತ ಜಿಲ್ಲೆಯಲ್ಲಿ ರೋಟರಿ ಕ್ಲಬ್ ವತಿಯಿಂದ ಕಂಬಳ ಕೂಟವು ಆಯೋಜಿಸಲಾಗಿದೆ.

ರೋಟರಿ ಕ್ಲಬ್ ಬಂಟ್ವಾಳ ಲೋರೆಟ್ಟೊ ಹಿಲ್ಸ್ ಪ್ರಾಯೋಜಕತ್ವದಲ್ಲಿ ಸಬ್ ಜೂನಿಯರ್ ಹಗ್ಗ ಮತ್ತು ನೇಗಿಲು ವಿಭಾಗದ ಕೋಣಗಳ ಕಂಬಳ ಕೂಟವು ಅ 19ರಂದು ನಡೆಯಲಿದೆ.

ಸಿದ್ದಕಟ್ಟೆ ಕೊಡಂಗೆ ಯ ನೂತನ ವೀರ-ವಿಕ್ರಮ ಕಂಬಳ ಕರೆಯಲ್ಲಿ ಈ ಕೂಟವು ನಡೆಯಲಿದೆ.
ಈ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕ್ಲಬ್ ಅಧ್ಯಕ್ಷ, ವಕೀಲರಾದ ಸುರೇಶ್ ಶೆಟ್ಟಿ ” ಪ್ರತಿ ವರ್ಷ ನಡೆಯುವ ಕಂಬಳ ಕೂಟದಲ್ಲಿ ಸಬ್ ಜೂನಿಯರ್ ವಿಭಾಗದ ಕೋಣಗಳ ಸ್ಪರ್ಧೆಗೆ ಸೂಕ್ತ ಅವಕಾಶ ಸಿಗುತ್ತಿಲ್ಲ, ಇದನ್ನು ಮನಗಂಡು ಕೋಣದ ಮಾಲಕರು, ರೋಟರಿ ಕ್ಲಬ್ ಲೋರೆಟ್ಟೊ ಹಿಲ್ಸ್ ನ ಸ್ಥಾಪಕಧ್ಯಕ್ಷ ಅವಿಲ್ ಮಿನೇಜಸ್ ನೇತೃತ್ವದಲ್ಲಿ ಈ ಕೂಟವನ್ನು ಆಯೋಜಿಸಲಾಗಿದೆ ಎಂದರು”.

ಸಾಮಾನ್ಯವಾಗಿ ಆಯಾ ಕಂಬಳ ಸಮಿತಿಗಳ ಮುಂದಾಳತ್ವದಲ್ಲಿ ಕೂಟವು ನಡೆಯುತ್ತದೆ, ಆದರೆ ಇಲ್ಲಿ ಕೋಣದ ಮಾಲಕರು, ಕ್ಲಬ್ ನ ಸ್ಥಾಪಕಧ್ಯಕ್ಷ ಅವಿಲ್ ಮಿನೇಜಸ್ ನೇತೃತ್ವದಲ್ಲಿ ಈ ಕೂಟವು ನಡೆಯಲಿದೆ.

ರೋಟರಿ ಕ್ಲಬ್ ಬಂಟ್ವಾಳ ಲೋರೆಟ್ಟೊ ಹಿಲ್ಸ್ ನ ಪ್ರಸ್ತುತ ಅಧ್ಯಕ್ಷ ಸುರೇಶ್ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಶೆಟ್ಟಿ ಶೀತಲ, ಕೋಶಾಧಿಕಾರಿ ರಾಘವೇಂದ್ರ ಭಟ್ ಇವರೆಲ್ಲ ಈ ಹಿಂದೆ ಕಂಬಳ ಸಮಿತಿಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದು ಈ ರೋಟರಿ ಕಂಬಳದ ನೇತೃತ್ವ ವಹಿಸಲಿದ್ದಾರೆ.

ಕಂಬಳ ಕೂಟವು ಬೆಳಗ್ಗೆ 8:30ಕ್ಕೆ ಪ್ರಾರಂಭಗೊಂಡು ರಾತ್ರಿ ಮುಕ್ತಾಯಗೊಳ್ಳಲಿದೆ.ಕೂಟವನ್ನು ಶ್ರೀ ಕ್ಷೇತ್ರ ಪೂಂಜಾದ ಪ್ರಧಾನ ಅರ್ಚಕರಾದ ಪ್ರಕಾಶ್ ಆಚಾರ್ಯ ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲಾ ಗವರ್ನರ್ ವಿಕ್ರಮ ದತ್ತ ಕೂಟಕ್ಕೆ ಚಾಲನೆ ನೀಡಲಿದ್ದಾರೆ.ಮಾಜಿ ಜಿಲ್ಲಾ ಗವರ್ನರ್ ಎನ್ ಪ್ರಕಾಶ್ ಕಾರಂತ್, 2026-27 ಣೆ ಸಾಲಿನ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗ, ಸಹಾಯಕ ಗವರ್ನರ್ ಡಾ. ಮುರಳಿಕೃಷ್ಣ, ಕೊಡಂಗೆ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಭಾಗವಹಿಸಲಿದ್ದಾರೆ.

ಸಂಜೆ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಐಕಳ ಭಾವ ದೇವಿಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚುರು ಸೇರಿದಂತೆ ಮತ್ತಿತರ ಪದಾಧಿಕಾರಿಗಳು, ಗಣ್ಯರು ಭಾಗವಹಿಸಲಿದ್ದಾರೆ.

ಎರಡು ವಿಭಾಗದ ವಿಜೇತ ಕೋಣಗಳ ಮಾಲೀಕರಿಗೆ ಪ್ರಥಮ ಅರ್ಧ ಪವನ್ ಚಿನ್ನದ ಪದಕ , ದ್ವಿತೀಯ ಕಾಲು ಪವನ್ ಚಿನ್ನದ ಪದಕ , ತ್ರತಿಯ ಹಾಗೂ ಚತುರ್ಥ ಸ್ಥಾನಕ್ಕೆ ತಲಾ 5 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು.ಎಲ್ಲಾ ಕೋಣದ ಮಾಲಕರಿಗೆ ಹಾಗೂ ಓಟಗಾರರಿಗೆ ವಿಶೇಷ ಟ್ರೋಫಿ ನೀಡಲಾಗುವುದು ಎಂದರು.

ಪತ್ರಿಕಾಗೋಷ್ಠಿ ಯಲ್ಲಿ ರೋಟರಿ ಹಿಲ್ಸ್ ಸ್ಥಾಪಕಧ್ಯಕ್ಷ ಅವಿಲ್ ಮಿನೇಜಸ್, ಕಾರ್ಯದರ್ಶಿ ರಾಜೇಶ್ ಶೆಟ್ಟಿ ಸೀತಲ, ಸದಸ್ಯ ಮೋಹನ್ ಕೆ ಶ್ರೀಯನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *