ಮಂಗಳೂರು: ನಗರದ DKCA ಕ್ರಿಕೆಟ್ ಅಕಾಡಮಿಯಲ್ಲಿ ತರಬೇತಿ ಪಡೆಯುತ್ತಿರುವ ಇಶಾನ್ ಎಸ್ ಕೋಟೆಕಾರ್ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮಂಗಳೂರು ವಿಭಾಗಕ್ಕೆ 16 ರ ವಯೋಮಿತಿಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇವರು ಸುಧೀರ್ ಕೋಟೆಕಾರ್ ಮತ್ತು ಅನಿತಾ ದಂಪತಿಯ ಪುತ್ರ . ಇಶಾನ್ ಎಸ್ ಕೋಟೆಕಾರ್ ಅವರು ಪ್ರಸ್ತುತ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಕೋಟೆಕಾರ್ ಇದರ ವಿದ್ಯಾರ್ಥಿಯಾಗಿದ್ದು ಅ. 17 ರಿಂದ ಬೆಂಗಳೂರಿನಲ್ಲಿ ನಡೆಯುವ ಅಂತರ ವಲಯ ಟೂರ್ನಮೆಂಟ್ ನಲ್ಲಿ ಮಂಗಳೂರು ವಲಯವನ್ನು ಪ್ರತಿನಿಧಿಸಲಿದ್ದಾರೆ.




