Breaking
25 Sep 2026, Fri

ಅಕ್ರಮವಾಗಿ ನಡೆಸುತ್ತಿದ್ದ ಕೆಂಪುಕಲ್ಲು ಗಣಿಗಾರಿಕೆ ಪೊಲೀಸರ ದಾಳಿ: ಓರ್ವ ಆರೋಪಿ ಬಂಧನ

ಉಡುಪಿ: ಅಕ್ರಮವಾಗಿ ನಡೆಸುತ್ತಿದ್ದ ಕೆಂಪುಕಲ್ಲು ಗಣಿಗಾರಿಕೆಗೆ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಬೈಂದೂರು ತಾಲೂಕಿನ ಗೊಳಿಹೋಳೆ ಗ್ರಾಮದ ಬಡ್ಕಿ ಎಂಬಲ್ಲಿ ಸರಕಾರಿ ಜಾಗದಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಆಲೂರು ಗ್ರಾಮದ ಮನೋಜ ಮೊಗವೀರ (43) ಎಂದು ಗುರುತಿಸಲಾಗಿದೆ.

ಸರಕಾರಿ ಜಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಸುಮಾರು 60*40 ಉದ್ದ ಅಗಲದ ವಿಸ್ತೀರ್ಣದಲ್ಲಿ ನೆಲದಿಂದ ಸುಮಾರು 3 ಅಡಿ ಅಳದಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದಿದೆ. ಅಲ್ಲದೇ ಸುಮಾರು 2 ಅಡಿ ಅಳದಷ್ಟು 2 ಹಾಸ್‌ ಸುಮಾರು 300 ಕೆಂಪು ಕಲ್ಲು ಕಳವು ಮಾಡಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬಂಧಿತ ಆರೋಪಿಯಿಂದ ಕಲ್ಲು ಕಟ್ಟಿಂಗ್‌ ಮಾಡುವ 1 ಕೆಂಪು ಬಣ್ಣದ ಸಣ್ಣ ಟಿಲ್ಲರ್ , 30 ಕಬ್ಬಿಣದ ಮೊಳೆಗಳು , 1 ಕಬ್ಬಿಣದ ಸುತ್ತಿಗೆ ಹಾಗೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ‌.

ಈ ಕುರಿತು ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *