ರಸ್ತೆಯಲ್ಲಿ ಬಿದ್ದಿದ್ದ ಪರ್ಸ್‌ನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ ಪ್ರಸಾದ್ ಜೋಗಿ

ಬಂಟ್ವಾಳ: ರಸ್ತೆಯಲ್ಲಿ ಬಿದ್ದಿದ್ದ ಪರ್ಸ್‌ನ್ನು ವಾಪಸ್‌ ನೀಡಿ ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಅನಂತಾಡಿ ನಿವಾಸಿ ಧನ್ಯಶ್ರೀ ಎಂಬವರ ದಾಖಲೆ ಹಾಗೂ ಸಾವಿರಾರು ರೂ. ಹಣ ಇದ್ದ ಪರ್ಸ್ ಮೆಲ್ಕಾರ್ ಸರ್ವೀಸ್ ರಸ್ತೆಯಲ್ಲಿ ಅ.12 ರಂದು ರಾತ್ರಿ 9 ಗಂಟೆ ವೇಳೆಗೆ ಕಳೆದುಹೋಗಿತ್ತು. ಈ ಪರ್ಸ್ ಪ್ರಸಾದ್ ಜೋಗಿಯವರಿಗೆ ಸಿಕ್ಕಿದ್ದು ಪರ್ಸ್ ನೊಳಗಡೆ ಇದ್ದ ಆಧಾರ್ ಕಾರ್ಡ್ ಬಳಸಿ ಧನ್ಯಶ್ರೀ ಅವರ ಮೊಬೈಲ್ ಸಂಖ್ಯೆಗೆ ಪ್ರಸಾದ್ ಜೋಗಿಯವರು ಕರೆ ಮಾಡಿದ್ದಾರೆ. ಬಳಿಕ ಇಂದು ಬೆಳಿಗ್ಗೆ ಪರ್ಸ್‌ನ್ನು ಸುರಕ್ಷಿತವಾಗಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *