ಉಡುಪಿ: ಗೋಲ್ಡ್ ಅಂಗಡಿ ಮಾಲಕನ ಮನೆಗೆ ನುಗ್ಗಿದ ಕಳ್ಳರು ಚಿನ್ನದ ಗಟ್ಟಿ ಕಳ್ಳತನ ಮಾಡಿರುವ ಘಟನೆ ಉಡುಪಿ ಗುಂಡಿಬೈಲಿನಲ್ಲಿ ಅ.14 ರಂದು ಬೆಳಗ್ಗಿನ ವೇಳೆ ನಡೆದಿದೆ.

ಆರ್ಯ ಗೋಲ್ಡ್ ಆ್ಯಂಡ್ ಸಿಲ್ವರ್ ಅಂಗಡಿ ಮಾಲೀಕ ಅಜಯ್ ಜಾಧವ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು 1 ಕೆ.ಜಿ ಗೂ ಅಧಿಕ ಚಿನ್ನವನ್ನು ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.




