ಪುತ್ತೂರು: ಮಗುವಿನ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಗೆ ಅಡ್ಡಿ ಆರೋಪದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಪಡ್ನೂರು ಗ್ರಾಮದ ಕಾರ್ಲ ಶ್ರೀರಾಮ ಭಜನಾ ಮಂದಿರದ ಬಳಿ ಶವ ಸಾಗಿಸುತ್ತಿದ್ದ ಆಂಬುಲೆನ್ಸ್ ನ್ನು ತಡೆದು ಅವಾಚ್ಯ ಪದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಅರೋಪ ಕೇಳಿ ಬಂದಿದೆ.

ಈ ಕುರಿತು ದೂರುದಾರ ಪುತ್ತೂರು ತಾಲೂಕಿನ ಅವಿನಾಶ್ ಎಂ. (32) ಅವರು ನೀಡಿರುವ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಿನಾಂಕ 12-10-2025 ರ ರಾತ್ರಿ 12:30 ಗಂಟೆಯ ಸುಮಾರಿಗೆ KA 21 AE 3033 ನಂಬರಿನ ಆಂಬುಲೆನ್ಸ್ ಶವ ಸಾಗಿಸುತ್ತಿರುವ ವೇಳೆ, KA 19 AE 7322 ನಂಬರಿನ ಬೊಲೆರೋ ವಾಹನವು ಹಿಂಬದಿಯಿಂದ ಓವರ್ಟೇಕ್ ಮಾಡಿ ರಸ್ತೆಗೆ ಅಡ್ಡಗಟ್ಟಿ ಅಕ್ರಮವಾಗಿ ತಡೆದಿದೆ ಎಂದು ತಿಳಿದು ಬಂದಿದೆ.

ಆಂಬುಲೆನ್ಸ್ ನಲ್ಲಿ ಮೃತಪಟ್ಟ ಬಾಲಕಿಯ ಶವವಿದ್ದು, ಮೃತರ ಕುಟುಂಬಸ್ಥರು ಗಾಯಗೊಂಡ ಪರಿಸ್ಥಿತಿಯಲ್ಲಿದ್ದರು. ಈ ಸಂದರ್ಭದಲ್ಲಿ ಆರೋಪಿತರು ಆಂಬುಲೆನ್ಸ್ ನಲ್ಲಿದ್ದವರೊಂದಿಗೆ ಅವಾಚ್ಯ ಶಬ್ದ ಬಳಸಿ ನಿಂದನೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.



