ಬೆಳ್ತಂಗಡಿ: ಅಕ್ರಮವಾಗಿ ಮಧ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಕುದ್ರಾಯ ಬಸ್ ನಿಲ್ದಾಣದ ಅಂಗಡಿ ಸಮೀಪ ನಡೆದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳಂಜ ಗ್ರಾಮದ ಕಾಯರ್ತಡ್ಕ ಪಂಚಮಿ ಪಾದೆ ಮನೆ ದಿ.ದುಗ್ಗಪ್ಪ ಗೌಡ ಮಗ ಶಾಂತಪ್ಪ (51) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಧರ್ಮಸ್ಥಳ-ನಿಡ್ಲೆ ಗ್ರಾಮದ ಬೀಟ್ ಸಿಬ್ಬಂದಿ ಸೆ.12 ರಂದು ಶೇಖರ ಗೌಡ ರವರು ಪಿಎಸ್ಐ ಗೆ ದೂರವಾಣಿ ಕರೆ ಮಾಡಿ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಕುದ್ರಾಯ ಬಸ್ಸು ತಂಗುದಾಣದ ಅಂಗಡಿ ಬಳಿ ಶಾಂತಪ್ಪ ಎಂಬಾತನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯವನ್ನು ಶೇಖರಿಸಿಟ್ಟು ವ್ಯಾಪಾರ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬ ಮಾಹಿತಿಯೊಂದು ಬಂದಿತ್ತು.

ಈ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಧರ್ಮಸ್ಥಳ ಪ್ರಭಾರ ಪಿಎಸ್ಐ ಸಿಕಂಧರ್ ಪಾಷಾ ಸಿಬ್ಬಂದಿಯೊಂದಿಗೆ ಇಲಾಖಾ ವಾಹನದಲ್ಲಿ ಠಾಣೆಯಿಂದ ಕುದ್ರಾಯ ಬಳಿ ನಿಂತುಕೊಂಡಿದ್ದ ಇಬ್ಬರನ್ನು ಪಂಚರನ್ನಾಗಿ ಕರೆದುಕೊಂಡು 2 ಗಂಟೆಗೆ ಪಂಚರೊಂದಿಗೆ ಅಲ್ಲಿಯೇ ಹತ್ತಿರದಲ್ಲಿದ್ದ ಅಂಗಡಿಯ ಬಳಿ ಹೋಗಿ ಸಿಬ್ಬಂದಿಯವರ ಜೊತೆಯಲ್ಲಿ ಅಂಗಡಿಯ ಒಳಗೆ ಹಾಗೂ ಅಂಗಡಿಯ ಹೊರಗೆ ಹುಡುಕಾಡಿದ ಸಮಯ ಅಂಗಡಿಯ ಹೊರಗಡೆ ಹಿಂಬದಿಯಲ್ಲಿ ಗೋಣಿ ಚೀಲದ ಕಟ್ಟೊಂದು ಇದ್ದು, ಅದರ ಸಮೀಪ ಒಬ್ಬ ವ್ಯಕ್ತಿ ನಿಂತುಕೊಂಡಿದ್ದ ಸಾಂತಪ್ಪ ಎಂಬಾತನನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಶೋಧನಾ ಕಾರ್ಯ ನಡೆಸಲು ಮಾನ್ಯ ನ್ಯಾಯಾಲಯದಿಂದ ಸಮುಚಿತ ಆದೇಶ ಪಡೆಯಲು ಕಾಲವಕಾಶ ಇಲ್ಲದ ಕಾರಣ ಕರ್ನಾಟಕ ಅಬಕಾರಿ ಕಾಯಿದೆ ಅಧಿನಿಯಮ 1965 ರ 54 ಪ್ರಕರಣಾಧೀನ ಬರೆದ ಶೋಧನಾ ಸರ್ಚ್ ವಾರಂಟ್ ಗೆ ಪಂಚರ ಸಹಿ ಪಡೆದ ಬಳಿಕ ಆರೋಪಿಯನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಅಕ್ರಮ ಮಧ್ಯ ಮಾರಾಟ ಮಾಡುವುದನ್ನು ಬಾಯಿಬಿಟ್ಟಿದ್ದಾನೆ.

ಬಳಿಕ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಮದ್ಯದ ಸ್ಯಾಚೆಟ್ ಗಳು ಇರುವುದಾಗಿ ತಿಳಿಸಿದ್ದು, ಪಂಚರ ಸಮಕ್ಷಮದಲ್ಲಿ ಆರೋಪಿತನ ಅಂಗ ಜಪ್ತಿ ಮಾಡಿ ಬಳಿಕ ಪ್ಲಾಸ್ಟಿಕ್ ಗೋಣಿ ಕೈ ಚೀಲವನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ 90 90 ML MYSORE LANCER Whisky ಎಂಬ ಹೆಸರಿರುವ ಒಟ್ಟು 36 ಸ್ಯಾಚೆಟ್ಗಳಲ್ಲಿ ಒಟ್ಟು 3.240 ಲೀಟರ್ ಮದ್ಯವಿದ್ದು ಇದರ ಅಂದಾಜು ಮೌಲ್ಯ ರೂ 1, 800/- ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.


