Breaking
19 Sep 2026, Sat

2025 ರ ನೊಬೆಲ್ ಶಾಂತಿ ಪ್ರಶಸ್ತಿಗೆ ವೆನೆಜುವೆಲಾದ ರಾಜಕಾರಣಿ, ಹೋರಾಟಗಾತಿ೯ ಮಾರಿಯಾ ಕೊರಿನಾ ಮಚಾದೊ ಆಯ್ಕೆ

ವೆನೆಜುವೆಲಾದ ರಾಜಕಾರಣಿ ಮತ್ತು ಹೋರಾಟಗಾತಿ೯ ಮಾರಿಯಾ ಕೊರಿನಾ ಮಚಾದೊ ಅವರಿಗೆ 2025 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲು ನಾರ್ವೆಯ ನೊಬೆಲ್‌ ಸಮಿತಿ ನಿರ್ಧರಿಸಿದೆ.

ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸಲು ನಿರಂತರ ಕೆಲಸ, ಸರ್ವಾಧಿಕಾರಿ ವಿರುದ್ಧ ನ್ಯಾಯಯುತ ಹೋರಾಟ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸಲು ಹೋರಾಟ ನಡೆಸುತ್ತಿರುವ ಕಾರಣದಿಂದ ಮಾರಿಯಾ ಕೊರಿನಾ ಮಚಾದೊ ಅವರನ್ನು 2025ನೇ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ತನ್ನ ಜೀವ ಉಳಿಸಿಕೊಳ್ಳಲು ಆಕೆ ತಲೆಮರೆಸಿಕೊಂಡಿದ್ದು, ಕಳೆದ ಒಂದುಮುಕ್ಕಾಲು ವರ್ಷದಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಸ್ವಂತ ದೇಶದಲ್ಲಿದ್ದರೆ ಕೊಲೆಯಾಗ್ತವೆ ಎಂಬ ಭಯದಲ್ಲಿ ಆಕೆಯ ಮೂವರು ಮಕ್ಕಳೂ ಪರದೇಶದಲ್ಲಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *