Breaking
25 Mar 2026, Wed

ಬೆಳ್ತಂಗಡಿಯಲ್ಲಿ ಚರಂಡಿಗೆ ಬಿದ್ದು ಶಿಕ್ಷಕನಿಗೆ ಗಂಭೀರ ಪ್ರಮಾಣದ ಗಾಯ

ಬೆಳ್ತಂಗಡಿ: ಬ್ಯಾನರ್ ಕಟ್ಟುವ ವೇಳೆ ತೆರೆದ ಚರಂಡಿಗೆ ಬಿದ್ದ ಶಿಕ್ಷಕರೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಮುಂಡಾಜೆ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟದ ಬ್ಯಾನರನ್ನು ಮಂಗಳೂರು-ವಿಲ್ಲುಪುರಂ ಹೆದ್ದಾರಿಯ ಸೋಮಂತಡ್ಕ ರಸ್ತೆ ಬದಿಯ ಪ್ರದೇಶದಲ್ಲಿ ಅಳವಡಿಸಲು ಸ್ವಯಂಸೇವಕರ ಜತೆ ಅ.9ರಂದು ಸಂಜೆ ಶಿಕ್ಷಕ ತೆರಳಿದ್ದರು.

ಈ ವೇಳೆ ಸಮೀಪದಲ್ಲಿರುವ ತೆರೆದ ಚರಂಡಿ ಗಮನಕ್ಕೆ ಬರದ ಕಾರಣ ಶಿಕ್ಷಕರೊಬ್ಬರು ಸುಮಾರು 6 ಅಡಿ ಆಳಕ್ಕೆ ಬಿದ್ದು ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸದ್ಯ ಅವರನ್ನು ಸ್ವರೂಪದ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *