Breaking
23 Mar 2026, Mon

ತಣ್ಣೀರುಪಂತ ಗ್ರಾಮದಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಅವಿವಾಹಿತ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದಲ್ಲಿ ಅ.9 ರಂದು ನಡೆದಿದೆ.

ತಣ್ಣೀರುಪಂತ ಬಿಲ್ಲವ ಸಂಘದ ಸಕ್ರಿಯ ಸದಸ್ಯ , ತಣ್ಣೀರುಪಂತ ಶಾರದ ಉತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಅಳಕ್ಕೆ (40ವ) ಮೃತ ದುರ್ದೈವಿಯಾಗಿದ್ದಾರೆ. ಗಾರೆ ಕೆಲಸದ ವೃತ್ತಿ ನಡೆಸುತ್ತಿದ್ದ ಸಂತೋಷ್ ಆರೋಗ್ಯದ ಸಮಸ್ಯೆಯಿಂದ ಕೆಲ ದಿನಗಳಿಂದ ಬಳಲುತಿದ್ದು, ಇದರಿಂದ ಮನನೊಂದು ಈ ರೀತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಗುರುವಾರ ತಾಯಿ ಬಳಿ ಹತ್ತಿರದ ತೋಟದಿಂದ ತೆಂಗಿನಕಾಯಿ ತರಲು ಹೇಳಿದ ಸಂತೋಷ್ ಮನೆಯ ಗೋಡೆಯ ಅಡ್ಡ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತರು ತಾಯಿ, ಮತ್ತು ಸಹೋದರಿಯರನ್ನು ಅಗಲಿದ್ದಾರೆ.

ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *