Breaking
20 Sep 2026, Sun

ಭರತ್ ಕುಮ್ಡೇಲು ಮಂಗಳೂರು ಜಿಲ್ಲಾ ಕೋರ್ಟ್ ಗೆ ಸರೆಂಡರ್

ಮಂಗಳೂರು: ಅಶ್ರಫ್ ಕಲಾಯಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಿಂದೂ ಸಂಘಟನೆ ಮುಖಂಡ ಭರತ್ ಕುಮ್ಡೇಲು ಮಂಗಳೂರು ಜಿಲ್ಲಾ ಕೋರ್ಟ್ ಗೆ ಅ.10 ಸರೆಂಡರ್ ಆಗಿದ್ದಾನೆ.

ಕಳೆದ 3-4 ತಿಂಗಳಿನಿಂದ ಭರತ್ ಕುಮ್ಡೇಲು ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಕೋರ್ಟ್ ವಾರೆಂಟ್ ಜಾರಿ ಮಾಡಿತ್ತು. ಇದರಿಂದ ಮಂಗಳೂರು ಜಿಲ್ಲಾ ಕೋರ್ಟ್ ಗೆ ತಮ್ಮ ವಕೀಲರ ಮೂಲಕ ಬಂದು ಸರೆಂಡರ್ ಅಗಿದ್ದಾನೆ ಎನ್ನಲಾಗಿದೆ.

ಬಂಟ್ವಾಳದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿ ಕೂಡ ಭರತ್ ಕುಮ್ಡೇಲ್ ಪ್ರಮುಖ ಆರೋಪಿಯಾಗಿದ್ದು ಬಂಟ್ವಾಳ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದರಿಂದ ಒಟ್ಟು 14 ಮಂದಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಕೋಕಾ ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಈ ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದು ಸರೆಂಡರ್ ಅಗಿದ್ದಾನೆ.

Leave a Reply

Your email address will not be published. Required fields are marked *