Breaking
23 Jun 2026, Tue

ಉಡುಪಿ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ವಶಪಡಿಸಿಕೊಂಡಿದ್ದ 15,21,427 ಮೌಲ್ಯದ ಮಾದಕ ದ್ರವ್ಯಗಳ ನಾಶ

ಉಡುಪಿ: ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ವಶಪಡಿಸಿಕೊಂಡಿದ್ದ ಮಾದಕ ದ್ರವ್ಯಗಳನ್ನು ಪಡುಬಿದ್ರಿ ಠಾಣಾ ಸರಹದ್ದಿನ ಮೆ. ಆಯುಷ್ ಎನ್ವಿರೋಟೆಕ್ ಪ್ರೈ. ಲಿ., ಪಡುಬಿದ್ರಿ ಎಂಬಲ್ಲಿ ನಾಶಪಡಿಸಲಾಯಿತು.

ನಾಶಪಡಿಸಿದ ಮಾದಕ ದ್ರವ್ಯಗಳ ಅಂದಾಜು ಮೌಲ್ಯವನ್ನು 15,21,427 ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿ ನಗರ ಠಾಣೆಯಲ್ಲಿ 3 ಪ್ರಕರಣಗಳು, ಸೆನ್ ಠಾಣೆಯಲ್ಲಿ 2 ಪ್ರಕರಣಗಳು, ಮಲ್ಪೆ, ಪಡುಬಿದ್ರಿ, ಶಿರ್ವಾ, ಕಾರ್ಕಳ ನಗರ ಹಾಗೂ ಮಣಿಪಾಲ ಠಾಣೆಯ ತಲಾ 1 ಪ್ರಕರಣ ಸೇರಿದಂತೆ ಒಟ್ಟು 10 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮಾದಕ ದ್ರವ್ಯ ಪದಾರ್ಥಗಳು ಇದರಲ್ಲಿ ಸೇರಿವೆ ಎಂದು ತಿಳಿದುಬಂದಿದೆ.

ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷ ಹರಿರಾಮ್ ಶಂಕರ್, ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿ ಸದಸ್ಯರು ಹಾಗೂ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಹರ್ಷಾ ಪ್ರಿಯಂವದಾ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಹಾಗೂ ಸದಸ್ಯರಾದ ಪ್ರಭು ಡಿ.ಟಿ. ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *