Breaking
25 Sep 2026, Fri

12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

ಮಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ 12 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಸಬ ಬೆಂಗ್ರೆ ನಿವಾಸಿ ಅಲ್ತಾಫ್ (47) ಬಂಧಿತ ಆರೋಪಿ

ಈತನ ವಿರುದ್ಧ ಮಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯ ಉತ್ತರ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ದಂಗೆ, ಶಸ್ತ್ರ ಪ್ರಯೋಗ, ಹಾನಿ ಮತ್ತು ಬೆದರಿಕೆ ಸೇರಿ ಹಲವು ಪ್ರಕರಣ ದಾಖಲಾಗಿತ್ತು.

ಈತನ ಬಗ್ಗೆ ಮಂಗಳೂರು 2ನೇ ಸಿ.ಜೆ.ಎಂ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿದ್ದು, ವಿಚಾರಣೆ ನಡೆಯುತ್ತಿತ್ತು. ಆದರೆ ವಿಚಾರಣೆಯ ಸಮಯದಲ್ಲಿ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು ನ್ಯಾಯಾಲಯವು ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣ ಎಂದು ಪರಿಗಣಿಸಿತ್ತು.

ಖಚಿತ ಮಾಹಿತಿಯ ಮೇರೆಗೆ, ಉತ್ತರ ಠಾಣೆಯ ಎಎಸ್‌ಐ ಬಾಬು, ಗುರು ಬಿ.ಟಿ ಮತ್ತು ಸುನಿಲ್ ಕುಮಾರ್ ಎನ್ ಅವರ ತಂಡವು ಅಕ್ಟೋಬರ್ 5ರಂದು ಮಂಗಳೂರು ಬಂದರು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

ಬಂಧಿತನನ್ನು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಆರೋಪಿಗೆ ಬಂಧನ ವಿಧಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *