Breaking
22 Mar 2026, Sun

ಕೋಟೇಶ್ವರದ ಕಟ್ಕೆರೆಯಲ್ಲಿ ಬೈಕ್ ಮೇಲೆ ಎರಗಿದ ಚಿರತೆ

ಕುಂದಾಪುರ: ಚಿರತೆಯೊಂದು ಬೈಕ್ ಮೇಲೆ ಎರಗಿರುವ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರದ ಕಟ್ಕೆರೆ ಮುಖ್ಯ ರಸ್ತೆಯ ಬಳಿ ನಡೆದಿದೆ.

ಅ. 4ರಂದು ರಾತ್ರಿ ಕಟ್ಕೆರೆ ನಿವಾಸಿ, ಉದ್ಯಮಿ ಪ್ರವೀಣ ಕುಮಾರ್ ಶೆಟ್ಟಿ ಅವರು ಕುಂದಾಪುರದಲ್ಲಿರುವ ಕಚೇರಿಯಿಂದ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಕಟ್ಕೆರೆ ಮುಖ್ಯ ರಸ್ತೆಯ ಬಳಿ ಕೈಗಾರಿಕಾ ವಲಯದಿಂದ ಧಾವಿಸಿ ಬಂದ ಚಿರತೆಯೊಂದು ಬೈಕಿನ ಮೇಲೆ ಎರಗಿದ್ದು ಬಳಿಕ ಚಿರತೆಯು ಸನಿಹದ ಕಾಡಿನಲ್ಲಿ ಮರೆಯಾಗಿದೆ ಎಂದು ತಿಳಿದು ಬಂದಿದೆ.

ಈ ವೇಳೆ ನಿಯಂತ್ರಣ ತಪ್ಪಿದ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದ ಅವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Leave a Reply

Your email address will not be published. Required fields are marked *